ಯುವಜನತೆ ಈ ದೇಶದ ಬೆನ್ನೆಲುಬು

ವಿಜಯಪುರ.ಮೇ೧೨: ರಾಷ್ಟ್ರೀಯ ಯುವ ಯೋಜನೆಯು ಈ ದೇಶದ ಅತಿದೊಡ್ಡ ಯುವ ಯೋಜನೆ ಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಧರ್ಮಸ್ಥಳದ ತಮ್ಮ ಗೃಹ ಕಚೇರಿ ಆವರಣದಲ್ಲಿ ವಿಜಯಪುರ ಪಟ್ಟಣದ ರಾಜ್ಯ ರಾಷ್ಟ್ರೀಯ ಯುವ ಯೋಜನೆ ವತಿಯಿಂದ ದೇಶದ ವಿವಿಚಿಧಡೆ ಆಯೋಜಿಸುವ ರಾಷ್ಟ್ರೀಯ ಭಾವೈಕ್ಯತಾ ಯುವ ಶಾಂತಿ ಶಿಬಿರ ಗಳಿಗೆ ಆಶೀರ್ವದಿಸಿ ಶುಭ ಕೋರಿ ದೇಶದ ಹಿರಿಯ ಗಾಂಧಿ ವಾದಿ ದಿವಂಗತ ಡಾ. ಎಸ್.ಎನ್ ಸುಬ್ಬರಾವ್ ರವರ ಹಿಂದಿನ ಮಾರ್ಗ ದರ್ಶನದಂತೆ ನಡೆಯುವ ರಾಷ್ಟ್ರೀಯ ಯುವ ಶಿಬಿರಗಳು ಯುವ ಜನರಿಗೆ ನಾಯಕತ್ವ ಗುಣ ಬೆಳವಣಿಗೆ ಯೊಂದಿಗೆ ಅವರ ವ್ಯಕ್ತಿತ್ವವನ್ನು ಸಹ ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿ ಗೊಳಿಸಲಾಗುತ್ತದೆ. ಹಾಗೂ ಈ ಯುವ ಯೋಜನೆಯ ಮೂಲಕ ದೇಶದ ಮೂಲೆ ಮೂಲೆಗಲಲ್ಲಿರುವ ಯುವಜನರಿಗೆ ರಾಷ್ಟ್ರೀಯ ಭಾವೈಕ್ಯತೆಯ ತರಬೇತಿಯನ್ನು ನೀಡಿ ಈ ರಾಷ್ಟ್ರ ನಿರ್ಮಾಣದ ಕಾರ್ಯ ದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವುದರೊಂದಿಗೆ ದೇಶಪ್ರೇಮ ಮತ್ತು ಸೇವಾ ಮನೋಭಾವನೆ ಯನ್ನು ಬೆಳೆಸುವುದಾಗಿದೆ ಎಂದರು.
ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ ಮಾತನಾಡಿ,ರಾಷ್ಟ್ರೀಯ ಯುವ ಯೋಜನೆ (ಎನ್.ವೈ.ಪಿ) ಗೆ ಸೇರಿದವರಿಗೆ ಸೇರುವ ಮೊದಲು ಉಂಟಾಗುವ ಪ್ರಶ್ನೆ ನಾವು ಈ ಸಮಾಜ ಸೇವೆ ಮಾಡುವುದರಿಂದ ನಮಗೇನು ಲಾಭ ವೆಂದು ಆದರೆ ಅದರಲ್ಲಿ ತೊಡಗಿದ ಮೇಲೆ ಗೊತ್ತಾಗುವುದು ತೊಡಗಿ ಕೊಂಡವರಿಗಾಗುವ ಲಾಭಗಳಾದ ಶಿಸ್ತು,ಸಮಯದ ಬೆಲೆ,ಸಹಬಾಳ್ವೆ, ಸಹಭೋಜನ,ಹೊಂದಾಣಿಕೆ,ಶ್ರಮದ ಮಹತ್ವ, ನಾಯಕತ್ವ ಗುಣ, ಪರಿಣಾಮಕಾರಿ ಭಾಷಣ ಕಲೆ,ಸಭಾ ಕಂಪನ ನಿವಾರಣೆ,ಪ್ರತಿಭಾ ಪ್ರದರ್ಶನ, ವ್ಯಕ್ತಿತ್ವ ವಿಕಸನ,ಆತ್ಮ ವಿಶ್ವಾಸ ದೊಂದಿಗೆ ಮಾನಸಿಕ ಸ್ಥೈರ್ಯ,ರಾಷ್ಟ್ರೀಯ ಭಾವೈಕ್ಯ-ರಾಷ್ಟ್ರಭಕ್ತಿ ಯೊಂದಿಗೆ ಯುವ ಜನರ ಜೀವನ ರೀತಿ-ನೀತಿ ಮತ್ತು ಸ್ವಾವಲಂಬಿ ಜೀವನ ಶೈಲಿಯ ಬೆಳವಣಿಗೆಗಳಾಗಿವೆ ಆದ್ದರಿಂದ ಈ ಮೇಲ್ಕಂಡ ಅಂಶಗಳನ್ನು ಆಧರಿಸಿ ರಾಷ್ಟ್ರೀಯ ಯುವ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಯುವಜನತೆಯಲ್ಲಿ ಕಾಣಬಹುದಾದ ಈ ಮಹತ್ವದ ಬದಲಾವಣೆಗಳಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉಪಸ್ಥಿಯಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ರವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ, ರಾಷ್ಟ್ರೀಯ ಯುವ ಸ್ವಯಂ ಸೇವಕ ಎಸ್.ಯೋಶಿತ್ ಕುಮಾರ್ ಹಾಗೂ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸ್ವಯಂಸೇವಕರ ವೃಂದ ಹಾಜರಿದ್ದರು.