ಯುವಜನತೆ ಅವಕಾಶ ಸದ್ಬಳಕೆ ಮಾಡಿಕೊಳ್ಳಲಿ

ದೇವದುರ್ಗ.ಆ.೦೩- ಸ್ಪರ್ಧಾತ್ಮಕ ಯುಗದಲ್ಲಿ ಹತ್ತು ಹಲವು ಉದ್ಯೋಗ ಅವಕಾಶಗಳು ತೆರೆದುಕೊಳ್ಳುತ್ತಿದ್ದು, ಯುವಕರು ಅವುಗಳನ್ನು ಬಾಜಿತಬ್ಬಿಕೊಳ್ಳುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮುಕ್ತಾಯಕ್ತ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ವಿನೋದಕುಮಾರ ಹಿರೇಬೂದೂರು ಹೇಳಿದರು.
ಪಟ್ಟಣದ ಖೇಣೇದ್ ಮುರಿಗೆಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಮಲದಕಲ್ ಗೆಳೆಯರ ಬಳಗ, ಜ್ಞಾನವೃಕ್ಷ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಗಾರದಲ್ಲಿ ಇಚ್ಚೇಗೆ ಮಾತನಾಡಿದರು. ತಾಲೂಕಿನ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ನಿರ್ಮಾಣದ ಉದ್ದೇಶದಿಂದ ಕಳೆದ ಒಂದು ತಿಂಗಳಿಂದ ಪ್ರತಿಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉನ್ನತ ಹುದ್ದೆಗಳಿಸಬೇಕು ಎಂದರು.
ಕಾಲೇಜು ಅಧ್ಯಕ್ಷ ನಿಖಿಲ್ ಖೇಣೇದ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಮುಂತಾದ ಹುದ್ದೆಗಳ ತರಬೇತಿ ಪಡೆದು ಆಯ್ಕೆಯಾಗಿ ತಾಲೂಕಿನ ಕೀರ್ತಿ ಬೆಳೆಸಬೇಕು ಎಂದು ಹೇಳಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಅಂಜಪ್ಪ ಬುದ್ದಿನ್ನಿ ತರಬೇತಿ ನೀಡಿದರು.
ಈಸಂದರ್ಭದಲ್ಲಿ ಪ್ರಾಚಾರ್ಯೆ ಪ್ರಗತಿ ವೀರೇಶ್, ಶಿವಪ್ರಸಾದ್ ನಾಗಲಿಕರ್, ಮಲದಕಲ್ ಗೆಳಯರ ಬಳಗದ ಚಿತ್ರಶೇಖರ್ ವಿಶ್ವಕರ್ಮ ಇತರರಿದ್ದರು.