ಯುವಜನತೆಯಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ-ನೀಕೇತ್ ರಾಜ್ ಮೌರ್ಯ

ಸುಳ್ಯ, ಜ.೭- ದೇಶದ ಯುವ ಜನತೆಯ ಕೈಯಲ್ಲಿ ಉದ್ಯೋಗ ಕೊಡುವ ಮೂಲಕ ಒಂದು ಒಳ್ಳೆಯ ಸಮಾಜ ನಿರ್ಮಾಣದಿಂದ ಬಲಿಷ್ಠ ಜಾತ್ಯಾತೀತ ಭಾರತ ಕಟ್ಟಬೇಕು. ಅದಕ್ಕಾಗಿ ಯುವಜನತರ ಕಾಂಗ್ರೆಸನ್ನು ಬೆಂಬಲಿಸಬೇಕು ಎಂದು ಕೆಪಿಸಿಸಿ ವಕ್ತಾರ ನೀಕೇತ್ ರಾಜ್ ಮೌರ್ಯ ಕರೆ ನೀಡಿದರು.
ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ, ಸುಳ್ಯ ಹಾಗು ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿ ವಿಜೇತರಾದ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗು ಮತದಾರರಿಗೆ ಕೃತಜ್ಞತೆ ಸಲ್ಲಿಕೆ ಕಾರ್ಯಕ್ರಮ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೋಯಿಂಗಾಜೆ
ಅಧ್ಯಕ್ಷತೆ ವಹಿಸಿದ್ದರು. ಅರಂತೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ವಿಜೇತರಾದ ಅಲೆಟ್ಟಿ, ಉಬರಡ್ಕ, ಮಕಂಜ, ಆರಂತೋಡು, ಸಂಪಾಜೆ ಮತ್ತು ನಾಪೋಕ್ಲು ವ್ಯಾಪ್ತಿಯ ಚೆಂಬು,ಪೇರಾಜೆ ,ಸಂಪಾಜೆ,ಮದೇ,ನಾಪೋಕ್ಲು ಗ್ರಾಪಂ ಸದಸ್ಯರನ್ನು ಅಭಿನಂದಿಸಲಾಯಿತು. ಕೆಪಿಸಿಸಿ ಮಾಜಿ ಸದಸ್ಯ ಎಂ.ವೆಂಕಪ್ಪಗೌಡ ಅಭಿನಂದನಾ ಭಾಷಣ ಮಾಡಿದರು. ಸುಳ್ಯ ಬ್ಲಾಕ್ ಕೆಪಿಸಿಸಿ ಉಸ್ತುವಾರಿ ಜಿ.ಕೃಷ್ಣಪ್ಪ, ಕೆಪಿಸಿಸಿ ವಕ್ತಾರ ಟಿ. ಪಿ.ರಮೇಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಸುರಯ್ಯ ಅಬ್ರಾಹರ್, ಪಿ.ಎಸ್.ಗಂಗಾಧರ್, ಯಮುನಾ, ಸುಂದರಿ, ಸೂರಜ್
ಹೊಸೂರು, ಜಿ.ಕೆ.ಹಮೀದ್, ರವಿರಾಜ್, ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಜಗದೀಶ್ ರೈ ,ಲೂಕಾಸ್. ಉಪಸ್ಥಿತರಿದ್ದರು. ಮಹಮದ್ ಕುಂಞಿ ಗೂನಡ್ಕ ಸ್ವಾಗತಿಸಿ, ಸವಾದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು, ಸೂರಜ್ ಹೊಸೂರು ವಂದಿಸಿದರು.