ಯುವಜನತೆಗೆ ಸ್ವಾಮಿ ವಿವೇಕಾನಂದರೂ ಸ್ಪೂರ್ತಿ- ಪಾಲ್ತೂರ್ ಶಿವರಾಜ

ಕೂಡ್ಲಿಗಿ.ಜ. 13:- ಇಂದಿನ ಯುವಜನತೆ ದೇಶದ ಆಸ್ತಿಯಾಗಿದ್ದು ದೇಶದ ಅಭಿವೃದ್ಧಿಯಲ್ಲಿ ಯುವಜನತೆ ಕೈ ಜೋಡಿಸಬೇಕು ಈಗಾಗಿಯೇ ಸ್ವಾಮಿ ವಿವೇಕಾನಂದರವರು ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ ಎಂದು ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಲ್ತೂರ್ ಶಿವರಾಜ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಸಂಘ ಮತ್ತು ಜೆಸಿಐ ಕೂಡ್ಲಿಗಿ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ರಾಷ್ಟೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಿವೇಕಾನಂದರು ಈ ದೇಶದ ಸಂಸ್ಕ್ರುತಿ ಮತ್ತು ಮೌಲ್ಯಗಳನ್ನು ಜಗತ್ತಿಗೆ ತೋರಿಸುವ ಮೂಲಕ ನಮ್ಮ ದೇಶದ ಗೌರವವನ್ನು ಹೆಚ್ಚಿಸಿದರು. ಇವರ ಅದಮ್ಯ ದೇಶಭಕ್ತಿ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದರು. ಯುವಕರು ದಾರಿ ತಪ್ಪಿದರೆ ದೇಶ ತಪ್ಪುವ ಅಪಾವಿರುತ್ತದೆ ಈಗಾಗಿ ಯುವಕರು ತಮ್ಮ ಪಾತ್ರವನ್ನರಿತು ದೇಶರಕ್ಷಣೆ, ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಯುವಕ, ಯುವತಿಯರಿಗೆ ಕಿವಿಮಾತು ಹೇಳಿದರು.
ಮುಖ್ಯ ಭಾಷಣಕಾರ ಗೌಡ್ರು ಬಸವರಾಜ ಮಾತನಾಡಿ ವಿವೇಕಾನಂದರು ತಮ್ಮ ಸ್ಪಷ್ಠ ಕಲ್ಪೆಯ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಅವರ ರಾಷ್ಟ್ರಭಕ್ತಿ, ಯುವಜನತೆಯ ಮೇಲಿರುವ ನಂಬಿಕೆ ಅನನ್ಯವಾದುದು, ಇಂದಿನ ಯುವಕರು ವಿವೇಕಾನಂದರ ಜೀವನ ಮೌಲ್ಯಗಳನ್ನು ಅನುಸಿರುವ ಮೂಲಕ ರಾಷ್ಟ್ರಕಟ್ಟುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು. ಯುವಜನತೆ ದುಶ್ಚಟಗಳಿಗೆ ಬಲಿಯಾಗದೇ ಸಮಾಜಮುಖಿ ಹಾಗೂ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾತ್ರದ ಬಗ್ಗೆ ಭಾಷಣಸ್ಪರ್ಧೆಯನ್ನು ಪಟ್ಟಣದ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ನಂತರ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ನಾಗರಾಜ ಹವಲ್ದಾರ್ ವಹಿಸಿದ್ದರು. ಉಪನ್ಯಾಸಕ ಸುಭಾಷ್ಚಂದ್ರಬೋಸ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ನಾಗರಾಜ, ವೆಂಕಟೇಶ್, ಜೆಸಿಐ ಅಧ್ಯಕ್ಷ ಅಬೂಬ್‌ಕರ್, ಬಿ.ಆರ್.ಪಿ. ತಳವಾರ ಶರಣಪ್ಪ ಮುಂತಾದವರು ಉಪಸ್ಥಿತರಿದ್ದರು.