ಇಂದಿನ ದಿನಗಳಲಿ ಬಾಂದವ್ಯ ಸಂಸ್ಕೃತಿ ಗ್ರಾಮೀಣ ಸೊಗಡು ಉಳಿಯಬೇಕಾದರೆ ಯುವಜನತೆ ನೆಲಮೂಲ ಸಂಸ್ಕೃತಿಯ ಕಡೆಗೆ ಸಾಗಬೇಕು ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯ ಆನಂದ್ ಮಾದಲಗೆರೆ ಅಭಿಪ್ರಾಯ ಪಟ್ಟರು.
ಪಟ್ಟಣದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆವರಣದ ಶ್ರೀ ದೇವಮ್ಮ ಚಿಕ್ಕಣ್ಣ ಸಭಾಂಗಣದಲ್ಲಿ ಬೆಳ್ಳಿ ಬೆಳದಿಂಗಳು ಟ್ರಸ್ಟ್ ಆಯೋಜಿಸಿದ ಜನಪದ ಕಲೆ ಮತ್ತು ಸಂಸ್ಕೃತಿ ಉತ್ಸವ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ, ಕಲಾವಿದರು ಉಳಿಯಲು ಹಾಗು ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ನೆಲಮೂಲ ಸಂಸ್ಕೃತಿಯ ಕಲೆಗಳನ್ನು ಉಳಿಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ. ಸಂಘ ಸಂಸ್ಥೆಗಳು ತೆರೆಮರೆಯಲ್ಲಿ ಇರುವ ಅನೇಕ ಕಲಾವಿದರನ್ನು ಯುವ ಉದಯೋನ್ಮುಕ ಕಲಾವಿದರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಅವರ ಪ್ರತಿಭೆಯನ್ನು ಗೌರವಿಸಿ ಕಲಾಪರಂಪರೆಯನ್ನ ಉಳಿಸುವ ಕೈಂಕಾರ್ಯಕ್ಕೆ ಮುಂದಾಗಬೇಕು ಎಂದರು.
ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಮೂಲ ಜಾನಪದ ಕಲೆಗಳ ಬಗ್ಗೆ ಮಾತನಾಡಿ, ಇಂದಿನ ಯುವಕರು ಸಾಂಸ್ಕೃತಿಕ ಇಲಾಖೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡು ಅಳಿವಿನಂಚಿಗೆ ಸಾಗುತ್ತಿರುವ ಆದಿಮ ಕಲೆಗಳು ಉಳಿದು ಬೆಳೆಯಬೇಕಾದರೆ ನುರಿತ ಹಿರಿಯ ಕಲಾವಿದರಿಂದ ಯುವ ಕಲಾವಿದರಿಗೆ ತರಭೇತಿ ನೀಡುವ ಹಾಗು ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರ ಗಮನಕ್ಕೆ ಜನಪದ ಕಲಾವಿದರು ಗಮನವಹಿಸಬೇಕು.
ಅನಕ್ಷರಸ್ತರು ಬಿಟ್ಟುಹೋಗಿರುವ ಮೌಖಿಕ ಪರಂಪರೆಯ ಮಹಾ ಕಾವ್ಯಗಳು ನೈತಿಖ ಮೌಲ್ಯಗಳ ವ್ಯಕ್ತಿಹಿಡಿಯುವ ಸಮಾಜದ ಸರ್ವಸ್ಥರಗಳ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಮುಂದಿನ ತಲೆಮಾರಿಗೆ ಆಕಾರಗಳಾಗಿ ಉಳಿಸಬೇಕು ಅವು ಮುಂದಿನ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿ ರೂಪಗೊಂಡು ಆಧುನಿಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡಬಲ್ಲ ಕಾವ್ಯಗಳಾಗಿ ರೂಪಗೊಳ್ಳುತ್ತವೆ ಎಂದರು.
ಸಾಹಿತಿ ಡಾ. ಕಾ.ವೇ.ಶ್ರೀನಿವಾಸಮೂರ್ತಿ ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವರು ಕಣ್ಮರೆಯಾಗುತ್ತಿರುವ ವಿವಿಧ ಕಲೆಗಳ ಜೊತೆಯಲ್ಲಿ ಜನಪದ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಯ ಮಕ್ಕಳಿಗೆ ಇಂದಿನ ಸಮಾಜದ ಆಗು-ಹೋಗುಗಳ ಬಗ್ಗೆ ಮತ್ತು ಅವರ ಜೀವನದ ಬದುಕಿಗಾಗಿ ಅರ್ಥೈಸಿಕೊಳ್ಳಬೇಕಾದರೆ ಇಂತಹ ಜನಪದ ಸಂಸ್ಕೃತಿ ಕಾರ್ಯಕ್ರಮಗಳು ಅವಶ್ಯ ಹಾಗೂ ಶಿಷ್ಟಕಲೆಗಳು ಜನಪದದ ಮುಂದುವರೆದ ಭಾಗಗಳಾಗಿ ರೂಪಗೊಂಡಿವೆ ಎಂದರು.