ಯುವಕ ನೀರು ಪಾಲು

ಮರಿಯಮ್ಮನಹಳ್ಳಿ, ಮಾ.30: ಪಟ್ಟಣದ ಯುವಕನೋರ್ವ ಸಮೀಪದ ಡಣನಾಯಕನಕೆರೆ ಗ್ರಾಮದ ಕೆರೆಯಲ್ಲಿ ಸ್ನಾನಕ್ಕೆಂದು ತೆರಳಿ ಕಾಲು ಜಾರಿ ಬಿದ್ದು ನೀರು ಪಾಲಾದ ಘಟನೆ ಸೋಮವಾರ ಜರುಗಿದೆ.
ಮೃತನನ್ನು ಮರಿಯಮ್ಮನಹಳ್ಳಿ ವಾಸಿ ರಾಘವೇಂದ್ರ (20) ಎಂದು ಗುರುತಿಸಲಾಗಿದ್ದು, ಮೃತ ಯುವಕ ಒಬ್ಬನೇ ಡಣನಾಯಕನಕೆರೆಗೆ ಸ್ನಾನಕ್ಕೆ ಹೋಗಿದ್ದನು ಎನ್ನಲಾಗಿದೆ. ಸ್ನಾನ ಮಾಡಲು ಕೆರೆಗೆ ಇಳಿಯುವ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಕುರಿತು ಮರಿಯಮ್ಮನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.