ಯುವಕ ನಾಪತ್ತೆ ದೂರು ದಾಖಲು

ಬಳ್ಳಾರಿ,ನ.05: ಜಿಲ್ಲೆಯ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ 25 ವರ್ಷದ ಡಿ.ಚಂದ್ರಪ್ಪ ಎಂಬುವರು 2020ನೇ ಜನವರಿ 07 ರಿಂದ ಗಂಗಾವತಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು.5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ಬಿಳಿ ಅಂಗಿ, ಕೆಂಪುನೀಲಿ ಬಣ್ಣದ ಲುಂಗಿ ಧರಿಸಿದ್ದು ಕನ್ನಡ, ತೆಲಗು ಭಾಷೆ ಮಾತಾನಾಡುತ್ತಾನೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹತ್ತಿರ ಪೊಲೀಸ್ ಠಾಣೆಗೆ ಅಥವಾ ಕೂಡ್ಲಿಗಿ ಠಾಣಾಧಿಕಾರಿ ದೂ.ಸಂ.08391-220223, 22003,220326 ಹಾಗೂ 08392-258100ಗೆ ಸಂಪರ್ಕಿಸಬೇಕು.