ಯುವಕ ಕಾಣೆ

ಧಾರವಾಡ,ಜ5: ಇಲ್ಲಿನ ಯಾಲಕ್ಕಿ ಶೆಟ್ಟರ್ ಕಾಲನಿ ನಿವಾಸಿ ಚೇತನ ಅರುಣಕುಮಾರ ಶಿರಸಂಗಿ (23) ಕಳೆದ ಡಿಸೆಂಬರ್ 11 ರಿಂದ ಕಾಣೆಯಾಗಿದ್ದಾನೆ. 5 ಅಡಿ 5 ಇಂಚು ಎತ್ತರ, ಕೋಲು ಮುಖ, ಏರು ಹಣೆ, ಗೋದಿಗೆಂಪು ಮೈ ಬಣ್ಣ, ಸಾಧಾರಣ ಮೈ ಕಟ್ಟು, ಏಡಗೈಯಲ್ಲಿ ಮಚ್ಚೆ ಇರುವ ಈ ಯುವಕ ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲೀಷ್ ಮಾತನಾಡುತ್ತಾನೆ.

ಈತನ ಮಾಹಿತಿ ಸಿಕ್ಕಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ಅಥವಾ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಲು ತಿಳಿಸಿದೆ.0836-2233513, 2233555, 9880776276 ದೂರವಾಣಿ ಸಂಖ್ಯೆಗಳಿಗೂ ಮಾಹಿತಿ ನೀಡಲು ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.