ಯುವಕ ಆತ್ಮಹತ್ಯೆ


ಬಂಕಾಪುರ,ಮೇ.1:ಪಟ್ಟಣದ ಯುವಕನೋರ್ವ ಕುಂಬಾರಗಟ್ಟಿ ಕೆರೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೊಂಡ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದ ಅಂಬೇಡ್ಕರ ನಗರದ ಬಸವರಾಜ ಯಲ್ಲಪ್ಪ ಮಾದರ (ಹಾದಿಮನಿ) (22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಪುರಸಭೆ ಪೌರ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿರುವ ಯಲ್ಲಪ್ಪ, ಮಗ ಮೃತ ಬಸವರಾಜನಿಗೆ ಮನೆತನ ನಿರ್ವಹಣೆ ಬಗ್ಗೆ ಬುದ್ದಿವಾದ ಹೇಳಿದ್ದಾನೆ. ಇದರಿಂದ ಕೋಪಿಸಿಕೊಂಡು ಮನೆ ಬಿಟ್ಟು ಹೋದ ಬಸವರಾಜ ಕುಂಬಾರಗಟ್ಟಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.