ಯುವಕರ ಸೇರ್ಪಡೆ ಪಕ್ಷಕ್ಕೆ ಬಲ – ಶಾಸಕ ಕೆ.ಶಿವನಗೌಡ ನಾಯಕ

ಅರಕೇರಾ.ಆ.೦೨- ಬಿಜೆಪಿ ತತ್ವ ಸಿದ್ಧಾಂತ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಯುವ ಕಾರ್ಯಕರ್ತರು ಪಕ್ಷಕ್ಕೆ ಬೆಂಬಲಿಸುವ ನಿಟ್ಟನಲ್ಲಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಶಾಸಕ ಕೆ. ಶಿವನಗೌಡ ನಾಯಕ ಹೇಳಿದರು.
ಅರಕೇರಾ ಅವರ ನಿವಾಸದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯುವ ಕಾರ್ಯಕರ್ತರು ಪಕ್ಷಕ್ಕೆ ಸೇರರ್ಪಡೆಯಾಗುತ್ತಿರುವುದು ಹೆಚ್ಚಿನ ಬಲ ತಂದಿದೆ ಎಂದರು. ಗ್ರಾಮೀಣಾ ಪ್ರದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಡ ಹಾಕಿ ಸಾಕಷ್ಟು ಅನುದಾನವನ್ನು ತರಲಾಗುತ್ತಿದೆ.
ತಾಲೂಕಿನಲ್ಲಿ ಎಲ್ಲ ಗ್ರಾಮಗಳಿಗೆ ರಸ್ತೆ, ಶಾಲಾ ಕಟ್ಟಡ, ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆ ರೂಪಿಸಲಾಗಿದ್ದು ಶೀಘ್ರವಾಗಿ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಮಲದಕಲ್ ಗ್ರಾಮದ ಸುಮಾರು ೭೦ ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಗಬ್ಬೂರು ಗ್ರಾಮದ ಸುಮಾರು ೨೦ ಯುವ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು ಅವರನ್ನು ಶಾಸಕ ಕೆ.ಶಿವನಗೌಡ ನಾಯಕ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ.ಅನಂತರಾಜ ನಾಯಕ, ಬಸವರಾಜ ವಕೀಲರು ಗಾಣಧಾಳ, ಜಹೀರಪಾಷ ಇಡಪನೂರು, ಪ್ರಶಾಂತ ಸಾಹು ದೇವದುರ್ಗ, ಶಿವಾನಂದ ರೆಡ್ಡಿಗೌಡ ಗೂಗಲ್, ವಿಜಯ ಕುಮಾರ ಮದರಕಲ್, ಶಿವಪುತ್ರ, ಲಕ್ಷ್ಮಣರಾಯ, ಹನುಮಂತ್ರಾಯ ಬುದ್ದಿನ್ನಿ. ಗೌರಿ ಶಂಕರಸ್ವಾಮಿ,
ವೆಂಕಟೇಶ ನಾಯಕ, ಯಂಕಪ್ಪ ಪೂಜಾರಿ, ಶೇಖರಪ್ಪ ,ಗಂಗಯ್ಯ ಖಾನಾಪುರ, ತಮ್ಮಣ್ಣ ಮಲದಕಲ್, ಸಂತೋಷ ಗಬ್ಬೂರು ಸೇರಿದಂತೆ ಇನ್ನಿತರರು ಇದ್ದರು.