ಯುವಕರ ಮೇಲೆ ಜಾನ್ಸನ್ ಲಸಿಕೆ ಪರೀಕ್ಷೆ

ವಾಷಿಂಗ್ಟನ್, ಏ.೩- ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೋನಾ ಸೋಂಕಿನ ಲಸಿಕೆಯನ್ನು ೧೬ ಮತ್ತು ೧೭ ವರ್ಷ ವಯೋಮಾನದವರ ಮೇಲೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಈಗಾಗಲೇ ಇಂಗ್ಲೆಂಡ್ ಮತ್ತು ಸ್ಪೇನ್ ನಲ್ಲಿ ಈ ವಯೋಮಾನದ ಹದಿಹರೆಯದವರ ಮೇಲೆ ಪ್ರಯೋಗ ನಡೆದಿದೆ.

ಅಮೇರಿಕಾದ ನ್ಯೂಜೆರ್ಸಿ ಮೂಲದ ಔಷಧ ತಯಾರಿಕಾ ಸಂಸ್ಥೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪರೀಕ್ಷೆಯನ್ನು ಆರಂಭಿಸಿತ್ತು. ಮೊದಲ ಹಂತದಲ್ಲಿ ಹನ್ನೆರಡರಿಂದ ಹದಿನೈದು ವರ್ಷ ವಯೋಮಾನದ ಮಕ್ಕಳ ಮೇಲೆ ಲಸಿಕೆಯನ್ನು ಪ್ರಯೋಗ ಮಾಡಿತ್ತು. ಅದರ ಫಲಿತಾಂಶದ ಆಧಾರದ ಮೇಲೆ ಇದೀಗ ೧೬ ಮತ್ತು ೧೭ ವಯಸ್ಸಿನವರ ಮೇಲೆ ಪರೀಕ್ಷೆಗೆ ಒಂದಾಗಿದೆ.

ಇಂಗ್ಲೆಂಡ್ ,ಸ್ಪೇನ್ ,ಅಮೆರಿಕ, ಕೆನಡಾ, ನೆದರ್ ಲ್ಯಾಂಡ್, ಬ್ರೆಜಿಲ್ ,ಅರ್ಜೆಂಟೀನಾ, ಸೇರಿದಂತೆ ವಿವಿಧ ದೇಶಗಳಲ್ಲಿ ಈ ವಯೋಮಾನದ ಹದಿಹರೆಯದ ಮಕ್ಕಳು ಪರೀಕ್ಷೆಗೆ ಒಳಪಡಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ತಿಳಿಸಿದೆ.

ಈ ವಯೋಮಾನದ ಮಕ್ಕಳಿಗೆ ಕೊರೋನಾ ಸೋಂಕಿನ ಒಂದು ಡೋಸ್ ಲಸಿಕೆ ನೀಡಿದರೆ ಸಾಕಾ ಅಥವಾ ಎರಡು ಡೋಸ್ ಲಸಿಕೆ ನೀಡಬೇಕಾ ಎನ್ನುವ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಮೂರು ತಿಂಗಳಲ್ಲಿ ಬರುವ ಸಾಧ್ಯತೆಗಳಿವೆ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆಯ ಜಾಗತಿಕ ಸಂಶೋಧನಾ ಮುಖ್ಯಸ್ಥ ಡಾ. ಮಾತೈ ಮಾಮ್ಮೆನ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಕೂಡ ಪ್ರಯೋಗ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಮೇ ಅಥವಾ ಜೂನ್ ತಿಂಗಳ ವೇಳೆಗೆ ಅಮೆರಿಕದಲ್ಲಿ ೧೦೦ ದಶಲಕ್ಷ ಜಾನ್ಸನ್ ಅಂಡ್ ಜಾನ್ಸನ್ ಅಮೆರಿಕದಲ್ಲಿ ಲಭ್ಯವಿರಲಿದೆ