ಯುವಕರು ಸಾಂಸ್ಕøತಿಕ ಪರಂಪರೆ ಮುಂದುವರೆಸಿ-ಶೆಟ್ಟರ್

ಧಾರವಾಡ, ನ.9- ಭಾರತದ ಕಲೆ, ಸಾಹಿತ್ಯ, ಸಂಗೀತ ಪರಂಪರೆಯು ಶ್ರೀಮಂತವಾಗಿದ್ದು, ನಾವು ನಮ್ಮ ಜಾನಪದಕಲೆ, ಸಂಸ್ಕøತಿಗಳನ್ನು ಮರೆತರೆ ನಮ್ಮತನವನ್ನು ಮರೆತಂತೆಯಾಗುತ್ತದೆ. ಸಾಂಸ್ಕøತಿಕ ಪರಂಪರೆಯನ್ನು ಮುಂದುವರೆಸಲು ಯುವಕರು ಆಸಕ್ತಿವಹಿಸಿ ಪಾಲ್ಗೊಳ್ಳಬೇಕೆಂದು ಬೃಹತ, ಮದ್ಯಮ ಕೈಗಾರಿಕಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.
ಅವರು ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ನಡೆದ 2019-2020ನೇ ಸಾಲಿನ ರಾಜ್ಯ ಮಟ್ಟದ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಪ್ರದಾನ ಮಾಡಿ, ಮಾತನಾಡಿದರು.
ನಾಡಿನ ಪರಂಪರೆಯಾಗಿರುವ ಕಲೆ, ಜಾನಪದಕಲೆ, ಸಾಹಿತ್ಯ, ಸಂಸ್ಕøತಿಗಳನ್ನು ಉಳಿಸಿ ಬೆಳೆಸಲು ಸರ್ಕಾರವು ವಿವಿಧ ಅಕಾಡೆಮಿಗಳ ಮೂಲಕ ನಿರಂತರವಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಭಜನೆ, ದೊಡ್ಡಾಟ, ಸಣ್ಣಾಟ, ಬಯಲಾಟ ಮತ್ತು ಜಾತ್ರೆ ಉತ್ಸವಗಳ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಪ್ರದರ್ಶಿಸುವ ಸಾಮಾಜಿಕ ನಾಟಕಗಳು ಜೀವನ ಮೌಲ್ಯಗಳನ್ನು ಸಮಾಜಕ್ಕೆ ಮನವರಿಕೆ ಮಾಡುತ್ತವೆ.
ಆದರೆ ಇಂದು ಟಿ.ವ್ಹಿ, ಮೂಬೈಲ್‍ಗಳ ಹಾವಳಿಯಿಂದಾಗಿ ಜನರು ಸಾಮಾಜಿಕ ನಾಟಕ ಹಾಗೂ ಜಾನಪದ ಕಲೆಗಳಿಂದ ವಿಮುಖರಾಗುತ್ತಿದ್ದಾರೆ. ಎಲ್ಲವನ್ನು ಫೇಸ್‍ಬುಕ್, ವಾಟ್ಸಾಆಫ್‍ಗಳ ಮೂಲಕ ನೋಡಿ ಆನಂದಿಸುತ್ತಿದ್ದಾರೆ. ಇದರಿಂದಾಗಿ ಜಾನಪದ ಕಲೆಗಳು ಪ್ರೋತ್ಸಾಗಳಿಲ್ಲದೆ ಕಣ್ಮರೆಯಾಗುತ್ತಿವೆ ಎಂದು ಅವರು ಹೇಳಿದರು.
ಮುಂದುವರೆದಿರುವ ಪಾಶ್ಚಿಮಾತ್ಯ ರಾಷ್ಟ್ರಗಳು ಸಹ ತಮ್ಮ ಕಲೆ, ಸಾಹಿತ್ಯ, ಜಾನಪದಕಲೆಗಳಿಗೆ ಆದ್ಯತೆ ನೀಡಿ, ಸಂರಕ್ಷೀಸುತ್ತಿದ್ದಾರೆ. ಭಾರತೀಯರಾದ ನಾವು ನಮ್ಮ ಕಲೆಗಳನ್ನು ಗೌರವವಿಸಿ, ಆರಾಧಿಸುವ ಮನೋಭಾವನೆ ಬೆಳಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ 2019-20 ನೇ ಸಾಲಿನ ಅಕಾಡಮಿ ಗೌರವ ಪ್ರಶಸ್ತಿಯನ್ನು ಜಾನಪದ ತಜ್ಞ ಡಾ. ಶ್ರೀಶೈಲ್ ಹುದ್ದಾರ ಅವರಿಗೆ 50 ಸಾವಿರ ರೂ.ಗಳ ಗೌರವಧನ, ಪ್ರಶಸ್ತಿ ಪತ್ರ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಎಮ್.ಎಸ್.ಮಾಳವಾಡ ಅವರಿಗೆ 25 ಸಾವಿರ ರೂ.ಗಳ ಗೌರವಧನ ಮತ್ತು ಪ್ರಶಸ್ತಿ ಪತ್ರ ನೀಡಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಡಾ. ಶ್ರೀಶೈಲ್ ಹುದ್ದಾರ ಮತ್ತು ಎಮ್.ಎಸ್.ಮಾಳವಾಡ ಮಾತನಾಡಿದರು.
ಕಾರ್ಯಕ್ರಮದ ಸಾನಿದ್ಯವಹಿಸಿ, ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿದರು.
ಅಧ್ಯಕ್ಷತೆಯನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ವಹಿಸಿದ್ದರು. ಕರ್ನಾಟಕ ಬಯಲಾಟ ಅಕಾಡಮಿ ಸದಸ್ಯರಾದ ಸಿದ್ದಪ್ಪ ಬಿರಾದಾರ ಸ್ವಾಗತಿಸಿದರು. ಮತ್ತು ಡಾ.ಕರಿಶಟ್ಟಿ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಎಲೆಗಾರ ಪ್ರಶಸ್ತಿ ಪುರಸ್ಕೃತರ ಸಾಧನೆ ಪರಿಚಯಿಸಿ, ಪ್ರಶಸ್ತಿ ಪತ್ರ ವಾಚಿಸಿದರು. ವೇದಿಕೆಯಲ್ಲಿ ಹಳಿಯಾಳದ ಜಾನಪದ ಕಲಾವಿದ ನಾರಾಯಣ ಹಾಗೂ ತಂಡದಿಂದ ಗೊಂಬೆಯಾಟ ಗೀತೆ ಪ್ರಸ್ತುತಪಡಿಸಿದರು. ಎಮ್.ಎಸ್. ಗಾಣೀಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಧಾರವಾಡ ಆಕಾಶವಾಣಿ ನಿಲಯ ನಿರ್ದೇಶಕ ಡಾ. ಬಸು ಬೇವಿನಗಿಡದ, ಜಾನಪದ ತಜ್ಞ, ಹಿರಿಯ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಸೇರಿದಂತೆ ವಿವಿಧ ಜಾನಪದ ಸಂಘಟನೆಗಳ ಮುಖ್ಯಸ್ಥರು, ಜಾನಪದ ಕಲಾವಿದರು ಉಪಸ್ಥಿತರಿದ್ದರು.