ಯುವಕರು ಸಾಂಸ್ಕøತಿಕ ಆಸಕ್ತಿ ಬೆಳೆಸಿಕೊಳ್ಳಿ: ಶರಣಗೌಡ ಕಂದಕೂರ

ಶಹಾಪುರ:ಸೆ.4: ಇಂದಿನ ಯುವಕರು ಹೆಚ್ಚಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು, ಓದುಬರಹದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಅವಶ್ಯಕವಾಗಿದೆ ಎಂದು ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಹೇಳಿದರು, ಯಾದಗಿರಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಹಭಾವನಾ ಸಂಸ್ಥೆ ಬಳಿಚಕ್ರ ಹಾಗೂ ಸಮನ್ವಯ ಸಂಸ್ಥೆ ಕಿಲ್ಲನಕೇರಾ ಉದ್ಘಾಟನೆ ಜೊತೆಗೆ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು , ಸಾಹಿತ್ಯ, ಸಾಂಸ್ಕೃತಿಕ,ಸಾಮಾಜಿಕ ರಂಗಭೂಮಿ,ಸಂಗೀತ ಹೀಗೆ ವಿಭಿನ್ನ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಸಮಾಜದಲ್ಲಿ ತನ್ನದೇ ಆದ ವಿಶೇಷ ವ್ಯಕ್ತಿತ್ವ ಹಾಗೂ ಗೌರವವನ್ನು ಹೊಂದಿರುತ್ತಾನೆ. ಯುವಜನರು ಓದುವ ಸಂಸ್ಕೃತಿಯ ಜೊತೆಗೆ ಸಾಹಿತ್ಯ, ಸಂಗೀತ ,ಸಂಸ್ಕೃತಿಯ ಆಸಕ್ತಿ ಬೆಳಸಿಕೊಳ್ಳಬೇಕಾಗಿದೆ ,ಆ ದಿಸೆಯಲ್ಲಿ ದೇವೇಂದ್ರಪ್ಪ ಧೋತ್ರೆ ಹಾಗೂ ಶಿವು ಬಳಿಚಕ್ರ, ಸಾಂಸ್ಕೃತಿಕ ಸಂಘವನ್ನು ಕಟ್ಟಿ ಸೇವೆ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು, ಸಂಸ್ಥೆಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ ಸಾಹಿತ್ಯ ಪರಿಷತ್ತಿನ ಮೂಲಕ ಈ ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು,ನಮ್ಮ ಜಿಲ್ಲೆ ಗಡಿ ಭಾಗದ ಜಿಲ್ಲೆಯಾಗಿದ್ದು ಇಲ್ಲಿ ಹೆಚ್ಚು ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಭಾಷೆ ಅಭಿಮಾನ ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು, ಬರುವ ದಿನಗಳಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಾದಗಿರಿಯಲ್ಲಿ ಆಯೋಜಿಸಲು ಉದ್ದೇಶಿಸಿದ್ದು ಜನಪ್ರತಿನಿಧಿಗಳ ಸಂಪೂರ್ಣ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು, ಕುಮಾರಿ ಶಿಲ್ಪಾ ಬಸವಂತಪುರ ರಚಿಸಿದ ಮನದ ಮಲ್ಲಿಗೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಸಿದ್ದರಾಮ ಹೊನ್ಕಲ್ ಮಾತನಾಡಿ , ಪಂಪನ ಕಾರಣದಿಂದ ಹರಿಕೇಸರಿ, ಬಸವಣ್ಣನ ಕಾರಣದಿಂದ ಬಿಜ್ಜಳ,ಬೀರಬಲ್ಲನ ಕಾರಣದಿಂದ ಅಕ್ಬರ್ ನೆನಪಾಗುತ್ತಾರೆ ,ಯಾಕೆಂದರೆ ಸಾಹಿತಿ, ಲೇಖಕ ಸಾಂಸ್ಕೃತಿಕ ರಾಯಭಾರಿಯಾಗಿರುತ್ತಾನೆ. ಆತ ಬರದದ್ದು ತಲೆಮಾರಿನಿಂದ ತಲೆಮಾರಿಗೆ ಹೋಗುತ್ತದೆ ಆ ಹಿನ್ನೆಲೆಯಲ್ಲಿ ಸಾಹಿತಿಯಾದವರು ಸಮಾಜ ಕಟ್ಟುವ ಕಡೆಗೆ, ನೊಂದವರ ಕಡೆಗೆ, ಬಡವರ ಕಡೆಗೆ ಸಮಾಜದ ಪ್ರಚಲಿತ ವಿದ್ಯಮಾನಗಳ ಕಡೆಗೆ ಸ್ಪಂದನೆ ನೀಡಬೇಕು ಎಂದು ಹೇಳಿದರು, ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ.ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ,ಚಿತ್ರನಟ ಡಿಂಗ್ರಿ ನರೇಶ್ ,ಪ್ರಕಾಶಕ ಎಂ ಕೆ ಶೇಖ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜಯರಾಮ್, ಉದ್ಯಮಿ ಮಲ್ಲಿಕಾರ್ಜುನ ಸಿರಗೊಳ, ಮಿತ್ರ ಸಂಸ್ಥೆಯ ಯೇಸು ಮಿತ್ರ ಭಾಸ್ಕರ್ ಹಾಗೂ ಸಂಸ್ಥೆಯ ಅಧ್ಯಕ್ಷರುಗಳಾದ ದೇವೇಂದ್ರಪ್ಪ ಧೋತ್ರೆ, ಶಿವು ಬಳಿಚಕ್ರ ಇದ್ದರು, ಸಾಹಿತಿ ಭಾಗ್ಯವತಿ ಕೆಂಭಾವಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 23 ಜನ ಕವಿಗಳು ಕವಿತೆಯನ್ನ ವಾಚಿಸಿದರು,ಕಾರ್ಯಕ್ರಮವನ್ನು ಗುರುಪ್ರಸಾದ್ ವೈದ್ಯ ನಿರೂಪಿಸಿದರು ಭಾಗ್ಯಶ್ರೀ ಶೆಳ್ಳಿಗಿ ಪ್ರಾರ್ಥಿಸಿದರು,ಹಣುಮಂತರಾಯ ದೇವತ್ಕಲ್ ಸ್ವಾಗತಿಸಿ ವಂದಿಸಿದರು,