ಯುವಕರು ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಿ

ಕಲಬುರಗಿ:ಡಿ.7:ಮಾತೃಭೂಮಿ ಸೇವಾ ಯುವಕ ಸಂಘ ಹಾಗೂ ಭಾರತ ಸರ್ಕಾರ ಇಲಾಖೆಯ ನೆಹರು ಯುವ ಕೇಂದ್ರ ವತಿಯಿಂದ ಅಫಜಲಪೂರ ತಾಲ್ಲೂಕಿನ ಮಾತೋಳಿ ಗ್ರಾಮದ ಶ್ರೀ ಬೆಳ್ಳಲಿಂಗೇಶ್ವರ ಸಭಾಗಂಣದಲ್ಲಿ ಯುವ ಸಂಘಗಳ ಅಭಿವೃದ್ಧಿ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಯುವ ಅಧಿಕಾರಿಗಳು ಹರ್ಷಲ್ ಸಿದ್ಧಾರ್ಥ ತಲಸ್ಕರ್ ಅವರು ಮಾತನಾಡಿ ಭಾರತ ದೇಶವು ಹಳ್ಳಿಗಳ ಒಳಗೊಂಡ ದೇಶವಾಗಿದ್ದು ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಹಳ್ಳಿಗಳು ಅಭಿವೃದ್ಧಿಯಾಗಬೇಕಾದರೆ ಹಳ್ಳಿಯಲ್ಲಿ ಇರುವಂತಹ ಯುವಕರು ಸೇವಾಭಾವದಿಂದ ಕಾರ್ಯವನ್ನು ಮಾಡಬೇಕಾಗಿದೆ ಈ ಸೇವಾಕಾರ್ಯಕ್ಕೆ ಮೂಲವೇ ಯುವಕ ಸಂಘಗಳ ಆಗಿದೆ ಹಾಗಾಗಿ ಭಾರತ ಸರ್ಕಾರ ಪ್ರತಿ ವರ್ಷವೂ ಕೂಡ ಯುವಕ ಸಂಘಗಳನ್ನು ಸ್ಥಾಪಿಸಿ ಸರಿಯಾದ ರೀತಿಯಲ್ಲಿ ಕಾರ್ಯಗಳನ್ನು ಮಾಡುವುದಕ್ಕೆ ಮಾರ್ಗದರ್ಶನ ಮಾಡುತ್ತ ಬಂದಿದೆ. ಹಾಗೂ ಸರ್ಕಾರದಿಂದ ಉತ್ತಮವಾದಂತಹ ಯುವಕ ಸಂಘಗಳಿಗೆ ಸರ್ಕಾರದಿಂದ
ಹಲವಾರು ರೀತಿಯ ಯೋಜನೆಗಳಿದ್ದು ಅವುಗಳನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಸ್ತಾವಿಕ ನುಡಿಗಳನ್ನಾಡಿದರ ಶ್ರೀ ಭೀಮರಾಯ ಇಟಗೊಂಡ ಅವರು ಮಾತನಾಡಿ ಭಾರತವು ಯುವಕರ ರಾಷ್ಟ್ರವಾಗಿತ್ತದ್ದು. ಯುವಕರ ನ ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವಂತಹ ಕೆಲಸಗಳನ್ನು ಮಾಡುವುದರಲ್ಲಿ ಯುವಕ ಸಂಘಗಳ ಪಾತ್ರವು ಬಹಳ ಪ್ರಮುಖವಾಗಿದೆ. ಹಾಗೂ ಸರ್ಕಾರದ ಹಲವಾರು ರೀತಿಯ ಯೋಜನೆಗಳನ್ನು ಹಳ್ಳಿಗಳಲ್ಲಿ ಜನಸಾಮಾನ್ಯರಿಗೆ ತಿಳಿಸುವಂತಹ ಕೆಲಸಗಳು ಈ ರೀತಿಯ ಯುವಕ ಸಂಘಗಳು ಪ್ರತಿಯೊಂದು ಹಳ್ಳಿಗಳಲ್ಲಿ ಮಾಡುವಂತಾಗಬೇಕು ಎಂದು ಹೇಳಿದರು. ಮತ್ತು ಯುವಕ ಸಂಘಗಳು ಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗುವುದರಿಂದ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾತೃಭೂಮಿ ಸೇವಾ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಆಲಮೇಲ, ಭಗತ್ ಸಿಂಗ್ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಗಲಿ. ಶ್ರೀರಾಮಚಂದ್ರ ಸುತಾರ್, ದೇವಪ್ಪ ಕನ್ನಡಿಗ, ನೆಹರು ಯುವ ಕೇಂದ್ರ ಸ್ವಯಂಸೇವಕರಾದ ಪ್ರವೀಣ್ ಇಟಗೊಂಡ , ರೇವಣಸಿದ್ಧ ಗೊಬ್ಬುರ್, ನಂದಿನಿ, ಹಾಗೂ ಹಲವಾರು ಯುವಕ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.