ಯುವಕರು ವ್ಯಸನಿಗಳಾಗುತ್ತಿರುವುದು ಅತಂಕದ ಸಂಗತಿ


ಸಂಡೂರು: ಜು: 9 : ಅಧುನಿಕತೆಯ ಹೆಸರಿನಲ್ಲಿ ಇಂದು ಬಳಷ್ಟು ಯುವಕರು ವ್ಯಸನಿಗಳಾಗುತ್ತಿರುವುದು ಅತಂಕದ ಸಂಗತಿಯಾಗಿದೆ, ಈ ಹಿಂದೆ ಮಧ್ಯಪಾನ, ಧೂಮಪಾನ, ಡ್ರಗ್ಸ ಸೇವನೆಯ ವ್ಯಸನಿಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವು ಅದರೆ ಕುಟುಂಬದಿಂದಲೇ ವ್ಯಸನಿಗಳಾಗುತ್ತಿರುವುದು ಕಂಡುಬರುತ್ತಿದೆ ಎಂದು ಉಪನ್ಯಾಸಕ ಬಸವರಾಜ ಬಣಕಾರ ತಿಳಿಸಿದರು.
ಅವರು ಪಟ್ಟಣದ ಶ್ರೀಶೈಲೇಶ್ವರ ಕನ್ನಡ ಮಾದ್ಯಮ ಶಾಲೆಯಲ್ಲಿ ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಸಹಯೋಗದಲ್ಲಿ ಮಾದಕ ವಸ್ತು , ವ್ಯಸನ ವಿರೋಧಿ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ನಾವು ಮಕ್ಕಳಿಗೆ ಮೊಬೈಲ್, ಜಂಕ್‍ಪುಡ್, ಪಾನೀಯ ವ್ಯಸನಿಗಳನ್ನಾಗಿಸುತ್ತಿರುವುದು ಅವರ ಕಲಿಕೆಗೆ ಬಹುದೊಡ್ಡ ಹೊಡೆತ ಬೀಳುತ್ತಿದೆ ಅದನ್ನು ತಪ್ಪಿಸಬೇಕೆಂದರೆ ನಾವು ವ್ಯಸನ ಮುಕ್ತರಾಗಬೇಕು, ಸರ್ವಜ್ಞ ಹೇಳುವಂತೆ ಮದ್ಯಪಾನವ ಮಾಡಿ ಇದ್ದುದೆಲ್ಲವ ನೀಡಿ ಸದ್ದಡಗಿ ಬಿದ್ದುಬರುವವನ ಮನೆಯ ಸದ್ದಡಗಿ ಹೋಗುವುದು ಎನ್ನುವಂತೆ ಇಡೀ ಕುಟುಂಬ ನಾಶವಾಗುತ್ತದೆ ವ್ಯಸನಿಗಳಿಂದ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾನೆ, ಮದ್ಯಪಾನ, ಧೂಮಪಾನಗಳಿಂದ ಕ್ಯಾನ್ಸ್‍ರನಂತಹ ಭಯಾನಕ ರೋಗಗಳು ಅವರಿಸಿಕೊಳ್ಳುವ ಮೂಲಕ ಬದುಕು ಶೂನ್ಯವಾಗುತ್ತಿದೆ, ಅದ್ದರಿಂದ ಯುವಕರನ್ನು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಲೋಕೇಶ್ ಅವರು ಮಾತನಾಡಿಸ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯವರು ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಇಂದು ಮಕ್ಕಳಿಗೆ ಮತ್ತು ಯುವಕರಿಗೆ ವ್ಯಸನ ಮುಕ್ತವಾಗಿಸುವಂತಹ ಮಹತ್ತರವಾದ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ, ಇಂತಹ ಕಾರ್ಯಕ್ರಮಗಳಿಗೆ ಶಾಲೆ ಸದಾ ಬೆಂಬಲಿಸುತ್ತದೆ, ಕಾರಣ ಮಕ್ಕಳಿಗೆ ತಿಳಿಸುವಂತಹ ಯೋಗ್ಯವಾದ ಅಂಶಗಳು ಅವರ ಬದುಕಿನುದ್ದಕ್ಕೂ ಉಳಿಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೃಷಿ ಅಧಿಕಾರಿ ರುದ್ರಪ್ಪ, ಮಂಜುಳ, ಲೋಕೇಶ್.ಬಿ. ರೂಪಾ.ಸಿ.ಅರ್., ರೂಪಾ.ಟಿ.ಅರ್. ರಘುನಾಥ, ಬಸವನಗೌಡ ಇವರು ಮಕ್ಕಳಿಗೆ ವ್ಯಸನಮುಕ್ತರಾಗುವ ಬಗ್ಗೆ ಮಾಹಿತಿ ನೀಡಿ ಉತ್ತಮ ಶಿಕ್ಷಣ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.