ಯುವಕರು ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳಿ

ಔರಾದ್ :ಜ.25: ವಿಶ್ವಕ್ಕೆ ರಾಷ್ಟ್ರದ ಬಗ್ಗೆ ಸಂದೇಶ ಸಾರಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ, ಅವರ ತತ್ವ ಆದರ್ಶಗಳು ಯುವ ಸಮೂಹಕ್ಕೆ ಪ್ರೇರಣಾ ಶಕ್ತಿಯಾಗಿ ನಿಲ್ಲುತ್ತವೆ ಎಂದು ಶಿಕ್ಷಕ ಶಿವಲಿಂಗ ಹೇಡೆ ಹೇಳಿದರು.

ತಾಲೂಕಿನ ಸಂತಪೂರ ಗ್ರಾಮದ ಜನತಾ ಪ್ರವೀಣ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ರಾಷ್ಟ್ರೀಯ ಯುವ ದಿನ ಹಾಗೂ ಪರಾಕ್ರಮ ದಿನ ಹಾಗೂ ಆದರ್ಶ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ದೇಶ, ವಿದೇಶದಲ್ಲಿ ಭಾರತೀಯ ಸಂಸ್ಕøತಿಯನ್ನು ಸಾರಿದ ವಿವೇಕಾನಂದರ ಆದರ್ಶಗಳನ್ನು ಇಂದಿನ ಯುವ ಪೀಳಿಗೆಯವರು ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಆದರ್ಶವಾಗಿ ಬದುಕಬೇಕು. ಅದಕ್ಕೆ ಬೇಕಾದ ವಾತಾವರಣ ಪಾಲಕರು, ಉಪನ್ಯಾಸಕರು ದೊರಕಿಸಿಕೊಡಬೇಕು ಎಂದರು. ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಆದರ್ಶಪ್ರಾಯರಾಗಿ ನಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಸಲಹೆ ನೀಡಿದರು.

ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಗುರಿಯೊಂದಿಗೆ ಸಂಕಲ್ಪ ಮಾಡಬೇಕು. ಮನಸ್ಸಿದ್ದರೆ ನಾವು ಅಂದು???ಂಡಿದ್ದನ್ನು ಸಾಧಿಸಬಹುದು. ವಿದ್ಯಾರ್ಥಿ ಜೀವನ ಎಂಬುದು ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ಅದನ್ನು ಸದುಪಯೋಗ ಪಡಿಸಿಕೆuಟಿಜeಜಿiಟಿeಜಳ್ಳಬೇಕು. ವಿದ್ಯಾರ್ಥಿ ಮತ್ತು ಯುವ ಸಮೂಹ ಛಲ ಮತ್ತು ಗುರಿ ಹೊಂದಿದ್ದಲ್ಲಿ ಮಾತ್ರ ದೇಶಕಟ್ಟಲು ಸಾಧ್ಯ. ವಿದ್ಯಾರ್ಥಿಗಳು, ಯುವ ಜನಾಂಗ ಸಮಾಜ ಮತ್ತು ದೇಶ ಕಟ್ಟುವಂತಹ ಶಕ್ತಿ ಹೊಂದಿದೆ ಎಂದರು.

ಗ್ರಾಪಂ ಪಿಡಿಒ ಸಂತೋಷ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ವಿಷಯದ ಬಗ್ಗೆ ಹೆಚ್ಚು ಗಮನ ಕೊಡದೆ ಓದಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಪಾಲಕರು ಕಷ್ಟ ಪಟ್ಟು ನಿಮಗೆ ವ್ಯಾಸಂಗ ಮಾಡಿಸುತ್ತಿದ್ದಾರೆ. ಅವರ ಶ್ರಮ ನೀವುಗಳು ವ್ಯರ್ಥ ಮಾಡಬಾರದು ಎಂದು ಸಲಹೆ ನೀಡಿದರು.

ಶಿಕ್ಷಕ ನಂದಾದೀಪ ಬೋರಾಳೆ ಮಾತನಾಡಿ ವಿದ್ಯಾರ್ಥಿಗಳಿಗೆ ಸಾಧಿಸುವ ಛಲ ಇರಬೇಕು ಅಂದಾಗ ಮಾತ್ರ ಸಾಧನೆ ಮಾಡದು ಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಯುಗಪುರುಷ ಚತುರೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಿತ್ರ ನಟ ಹಣ್ಮು ಪಾಜಿ, ಸ್ವಾಮಿ ವಿವೇಕಾನಂದ ಸಂಘದ ಜಿಲ್ಲಾ ಅಧ್ಯಕ್ಷ ಚೇತನ್ ಸೊರಳ್ಳಿ, ಸಂಸ್ಥೆಯ ಕಾರ್ಯದರ್ಶಿ ತಾರಕಾಂತ,ಗಣೇಶ ಮೇತ್ರೆ, ಅನಿತಾ ಆಲೂರೆ, ರವಿ ಪವಾರ್, ಸತೀಶ ರಾಠೋಡ, ನಾಗೇಶ ರಾಠೋಡ, ಗೌಸೋದ್ದಿನ ಸೇರಿದಂತೆ ಅನೇಕರಿದ್ದರು.


ಸತ್ಕಾರ : ಈ ವೇಳೆ ಕಾಲೇಜಿನಲ್ಲಿ ಆದರ್ಶ ವಿದ್ಯಾಗಳೆಂದು ಪರಿಗಣಿಸಿ ಬಿಲಾಲ್ ಅಹ್ಮದಮಿಯ್ಯಾ, ಆದಿತ್ಯ ಮಿಲಿಂದ್, ದಿಗಂಬರ ನಾರಾಯಣ, ಬಳಿರಾಮ ತುಕಾರಾಮ, ಸುಶೀಲಾ ಶಿರೋಮಣಿ, ಶಿಮಾ ನಸೀರ್ ಅಹ್ಮದ್, ತಯ್ಯಬಾ ಜಾಹಾಂಗೀರ್ ಅವರಿಗೆ ಸತ್ಕರಿಸಲಾಯಿತು.