ಯುವಕರು ಲಸಿಕೆ ಪಡೆಯಿರಿ: ಅನೀಲ ಕಂಟ್ಲಿ

ಚಿಂಚೋಳಿ ಮೇ 2: ಯುವಕರು ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ತಾಲೂಕಿನ ಬಿಜೆಪಿ ಯುವ ಮೋರ್ಚಾದ ನಾಯಕ ಅನೀಲ ಕುಮಾರ ಕಂಟ್ಲಿ ಕಲ್ಲೂರು ಅವರು ಹೇಳಿದ್ದಾರೆ. ಭಾರತ ದೇಶದಲ್ಲಿ ವ್ಯಾಪಾಕವಾಗಿ ಹರಡುತ್ತಿರುವ ಕೊರೋನಾ ಸೋಂಕು ತಡೆಗಟ್ಟಬೇಕಾದರೆ ಇಂದಿನ ಯುವಕರು ಕೊರೋನ ಬಗ್ಗೆ ಜಾಗೃತಿ ಗೊಂಡು 18 ವರ್ಷದ ಮೇಲ್ಪಟ್ಟವರು ಕೋವಿಡ್ 19 ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್-19 ಬಗ್ಗೆ ಭಯ ಬೇಡ. ಜಾಗ್ರತೆಯಿಂದ ಇದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಿ ಕೈಗಳಿಗೆ ಸ್ಯಾನಿಟೈಜರ್ ಉಪಯೋಗ ಮಾಡಬೇಕು.ಇಂದಿನ ಯುವಕರೇ ನಾಳೆ ಪ್ರಜೆಗಳು ಎನ್ನುವಂತೆ ಚಿಂಚೋಳಿ ತಾಲ್ಲೂಕು ಕೋವಿಡ್ ಮುಕ್ತ ತಾಲೂಕ ಮಾಡಬೇಕೆಂದು ಹಾಗೂ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ,ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಕೋವಿಡ್ 19 ರೋಗ ತಡೆಯಲು ರಾತ್ರಿ-ಹಗಲು ಕೆಲಸ ಮಾಡಿ ಶ್ರಮಿಸುತ್ತಿದ್ದಾರೆ.ಆದ್ದರಿಂದ ಎಲ್ಲಾ ಯುವಕರು ಜಾಗ್ರತೆಯಿಂದ ಇದ್ದು ಮುಂಬರುವ ದಿನಗಳಲ್ಲಿ ಕೊರೊನಾ ಹರಡದಂತೆ ಜಾಗ್ರತೆ ವಹಿಸಬೇಕೆಂದು ಕೋರಿದ್ದಾರೆ.