ಯುವಕರು ಧರ್ಮವನ್ನು ಉಳಿಸುವ ಬೆಳೆಸುವ ಪಣ ತೊಡಬೇಕು

ಮೈಸೂರು: ನ.17:- ರಾಷ್ಟ್ರೀಯ ಹಿಂದೂ ಸಮಿತಿಯ ವರ್ಷದ ಸಾಧನೆ ಹಾಗು ಕಾರ್ಯವೈಖರಿಯನ್ನು ಶ್ರೀ ದತ್ತ ವಿಜಯಾನಂದ ತೀರ್ಥರು ಬಿಡುಗಡೆ ಮಾಡುವ ಮೂಲಕ ಶುಭಾಶಯ ತಿಳಿಸಿ ಆಶಿರ್ವಾದ ಮಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಪೂಜ್ಯ ಗುರುಗಳಾದ ಶ್ರೀ ದತ್ತ ವಿಜಯಾನಂದ ತೀರ್ಥರು “ರಾಷ್ಟ್ರೀಯ ಹಿಂದೂ ಸಮಿತಿಯು ಒಂದು ವರ್ಷದಿಂದ ಮಾಡಿದ ಕೆಲಸಗಳನ್ನು ನೋಡಿದರೆ ಮನಸ್ಸಿಗೆ ಬಹಳ ಖುಷಿ ಆಗುತ್ತದೆ ಇಂತಹ ಯುವ ಸಮೂಹದ ಮೂಲಕ ಧರ್ಮಕ್ಕೆ ಬಹಳ ಕೆಲಸಗಳು ಆಗಬೇಕಿದೆ ಸನಾತನ ಹಿಂದೂ ಧರ್ಮವನ್ನು ಉಳಿಸಬೇಕಿರುವುದು ಯುವಕರ ಕರ್ತವ್ಯ ಯುವಕ ಎಂದರೆ ಕೇವಲ ವಯಸ್ಸಿನಲ್ಲಿ ಮಾತ್ರವಲ್ಲ ಕೆಲಸದಲ್ಲು ಯುವಕನೆ ಆಗಿರಬೇಕು ಇಂತಹ ಯುವ ಸಮುದಾಯಕ್ಕೆ ಸಮಾಜ ಹಾಗು ಧರ್ಮ ಪೆÇ್ರೀತ್ಸಾಹ ನೀಡಬೇಕು ರಾಷ್ಟ್ರೀಯ ಹಿಂದೂ ಸಮಿತಿಯನ್ನು ಪ್ರತಿಯೊಬ್ಬ ಹಿಂದೂ ಕೂಡ ಬೆಂಬಲಿಸಬೇಕು, ಹಿಂದೂ ಧರ್ಮದ ಶಕ್ತಿಯನ್ನು ಅರಿತರೆ ಸಾಕು ಯಾರು ಹಿಂದೂ ಧರ್ಮದ ಬಗ್ಗೆ ಯಾರು ಲೇವಡಿ ಮಾಡುವುದಿಲ್ಲ, ಇತ್ತಿಚಿನ ದಿನಗಳಲ್ಲಿ ಹಿಂದೂ ಧರ್ಮದ ಕುರಿತು ಬಾಯಿಗೆ ಬಂದಂತೆ ಮಾತನಾಡಿ ಪ್ರಚಾರ ಮಾಡುತ್ತಿರುವ ಈ ಕಾಲದಲ್ಲಿ ಇಂತಹ ಯುವ ಸಮುದಾಯವನ್ನು ನೋಡಿದಾಗ ಮನಸ್ಸಿಗೆ ಬಹಳ ಖುಷಿಯಾಗುತ್ತದೆ” ಎಂದು ಆಶಿರ್ವಾದ ಮಾಡಿದರು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿಯ ಅಧ್ಯಕ್ಷ ವಿಕಾಸ್ ಶಾಸ್ತ್ರೀ ಪದಾಧಿಕಾರಿಗಳಾದ ಪ್ರದೀಪ್, ತೇಜಸ್, ಚಿದಂಬರಂ ,ನಿತಿನ್ ಗಗನ್ ಮತ್ತಿತರರು ಉಪಸ್ಥಿತರಿದ್ದರು.