ಯುವಕರು ದೇಶಿಯ ಕ್ರೀಡೆಯನ್ನು ಮೈಗೂಡಿಸಿಕೊಳಬೇಕು

ಸಿರವಾರ.ಜ೧೨: ಇಂದಿನ ಆಧುನಿಕ ಜೀವನದಲ್ಲಿ ಕ್ರೀಕೇಟ್ ಮಾತ್ರ ಕ್ರೀಡೆ ಎಂದುಕೊಂಡಿದ್ದಾರೆ, ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಗ್ರಾಮೀಣ ಕ್ರೀಡೆಗಳ ಉಳಿವಿಗಾಗಿ ಯುವ ಜನತೆ ದೇಶಿಯ ಕ್ರೀಢೆಯಾದ ಕಬ್ಬಡಿ ಆಡುತ್ತಿರುವುದು ಉತ್ತಮ ಬೆಳವಣಿಗೆ ಮಾನ್ವಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಹೇಳಿದರು.
ತಾಲೂಕಿನ ಮಾಚನೂರು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಕಬ್ಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಕ್ರೀಡೆಗಳಿಂದ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಸಧೃಡತೆ ಹೆಚ್ಚಾಗುತ್ತದೆ. ಯುವಕರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು. ಆಸಕ್ತಿಯಿರುವ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದರು. ಮೆಕೋ ಕಂಟ್ರಕ್ಷನ್ಸ್ ಅಧ್ಯಕ್ಷರಾದ ಎಂ.ಈರಣ್ಣ ಅವರು ಮಾತನಾಡಿ ಮೊಬೈಲ್ ಯುಗ ಆರಂಭದ ನಂತರ ಯುವಕರು ಕ್ರೀಡೆಗಳನ್ನು ಮರೆತು, ಮೊಬೈಲ್ ದಾಸರಾಗಿ ಆನ್ಲೈನ್ ಆಟಗಳಿಗೆ ಆದ್ಯತೆ ನೀಡುತ್ತಿರುವುದು ಖೇದನಿಯ ಸಂಗತಿ. ಇದರ ನಡುವೆಯೂ ಗ್ರಾಮೀಣ ಕ್ರೀಡೆಗಳ ಉಳಿವಿಗಾಗಿ ಮಾಚನೂರು ಗ್ರಾಮದ ಯುವಕರು ಕಬಡ್ಡಿ ಕ್ರೀಡೆ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದರು.
ಕ್ರೀಡೆಯಲ್ಲಿ ೩೫ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು.
ಕೆಎಸ್‌ಎನ್ ಅಭಿಮಾನಿ ಬಳಗದಿಂದ ೧೦ ಸಾವಿರ ರೂ. ನಗದು ಬಹುಮಾನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ ವೀರನಗೌಡ, ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿ ಸದಸ್ಯ ವಿರೇಶ ನಾಯಕ ಬೆಟ್ಟದೂರು, ರಾಮಣ್ಣ ಮಾನ್ವಿ, ಗ್ರಾ. ಪಂ. ಸದಸ್ಯರಾದ ಅಂಬಣ್ಣ ಕಡದೊಡ್ಡಿ, ವಜ್ರದಯ್ಯ ನಾಯಕ, ಆಂಜನೇಯ ಛಲವಾದಿ, ನಾಗರಾಜ ನಾಯಕ ತುಪ್ಪದೂರು, ಕರವೇ ಅಧ್ಯಕ್ಷ ಶಿವಪ್ಪ ಕೊಸಗಿ, ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಜಿ, ಶಿಕ್ಷಕರಾದ ಮಾಲತೇಶ ಟಿ, ರವಿಕುಮಾರ್, ಜಯಪ್ಪ, ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ಅನಿಲ್ ಕುಮಾರ,ಪ್ರ. ಕಾರ್ಯದರ್ಶಿ ನರಸಿಂಹ, ಸಮೀರ ಅಪ್ಪು, ವಿಜಯ, ಮಂಜುನಾಥ, ಸಂತೋಷ, ಅಲ್ಲವಲಿ, ಇಸ್ಮಾಯಿಲ್, ರಮೇಶ, ಉಪೇಂದ್ರ, ರಸೂಲ್, ಹುಲಿಗೇಶ, ಧನಂಜಯ, ಬಾಲಾಜಿ ನಾಯಕ, ಮಯೂರ, ಯಲ್ಲಾಲಿಂಗ, ಮಹಾಳಿಂಗರಾಯ, ಹನುಮೇಶ ಬೆಂಕಿ, ಸಿದ್ದು ಸೇರಿದಂತೆ ಸ್ವಾಮಿ ವಿವೇಕಾನಂದ ಸಂಘದ ಸದಸ್ಯರು ಮತ್ತು ಯುವಕರು ಇದ್ದರು.