ಯುವಕರು ದೇಶದ ಆಸ್ತಿ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ಯುವ ಸಮೂಹ  ದೇಶದ ಆಸ್ತಿ,  ಅವರನ್ನು ಕಟ್ಟಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ. ಅಂತಹ ಕಾರ್ಯವನ್ನು  ಕೇಂದ್ರ ಸರ್ಕಾದ ನೆಹರು ಯುವಕ ಕೇಂದ್ರ ಮಾಡುತ್ತಿದೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ಇಂದು ಲಿಯಾ ಸಂಸ್ಥೆ ಸಹಯೋಗದಲ್ಲಿ ನೆಹರು ಯುವ ಕೇಂದ್ರವು    ಬಳ್ಳಾರಿಯ  ಸೇಂಟ್ ಆಂತೋನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯುವ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯುವ ಸಮೂಹ ಸರಿದಾರಿಯಲ್ಲಿ ಸಾಗಬೇಕು ಆಗ ದೇಶದ ಅಭಿವೃದ್ಧಿ ಆಗಲಿದೆಂದರು.
ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಥ ಧರ್ಮಗುರು ಬಿಷಪ್ ಡಿಸೋಜ ಮಾತನಾಡಿ. ಸಾಧಕ, ಬಾಧಕ, ನಿಷ್ಪ್ರಯೋಜಕ ಎಂಬ ಮೂರು ವರ್ಗಗಳಿದ್ದು ನಾವೆಲ್ಲರೂ ಸಾಧಕ ವರ್ಗಕ್ಕೆ ಸೇರಿಕೊಳ್ಳೋಣ.  ಯುವಶಕ್ತಿಯ ಮುಂದೆ ಯಾವ ಶಕ್ತಿಯು ನಿಲ್ಲಲಾರದು ಎಂದರು.
ವೇದಿಕೆಯಲ್ಲಿ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು, ಬಳ್ಳಾರಿ  ಕೆಎಂಎಫ್  ನಿರ್ದೇಶಕ  ವೀರಶೇಖರ್ ರೆಡ್ಡಿ, ಪಾಲಿಕೆ ಸದಸ್ಯ ಶ್ರೀನಿವಾಸ್ ಪೋತ್ಕಾರ್, ಮಾಜಿ  ಸದಸ್ಯ ಮಲ್ಲನಗೌಡ,
ನೆಹರು ಯುವ ಕೇಂದ್ರದ  ಸಹಾಯಕ ನಿರ್ದೇಶಕ  ಮಾಂಟೋ  ಪತ್ತಾರ್,  ಲಿಯಾ ಸಂಸ್ಥೆಯ ಅಧ್ಯಕ್ಷ ಅಬ್ರಹಾಂ ಉಪಸ್ಥಿತರಿದ್ದರು
ಬಳ್ಳಾರಿ ಜಿಲ್ಲೆಯ ವಿವಿಧ ಕಾಲೇಜುಗಳು ಮತ್ತು ಸಂಘ ಸಂಸ್ಥೆಗಳಿಂದ ಬಂದಿದ್ದ ಯುವಕರಿಂದ ಚಿತ್ರಕಲೆ, ನೃತ್ಯ,  ಆಶುಭಾಷಣ, ಫೋಟೋಗ್ರಾಫಿ, ಕವನ ವಾಚನ ಮುಂತಾದ ಸ್ಪರ್ಧೆಗಳು ನಡೆದವು.