ಯುವಕರು ದೇಶಕ್ಕೆ ಆಸ್ತಿಯಾಗಬೇಕು

ಕೋಲಾರ,ಜ,೧೩:ನಮ್ಮ ದೇಶದಲ್ಲಿ ಯುವಶಕ್ತಿ ಹೆಚ್ಚಿದ್ದು, ದೇಶದ ಅಭಿವೃದ್ದಿಗೆ ಯುವಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಯಬೇಕು ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ಕೋಲಾರ ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೇ ಕಾಲೇಜು, ಸ್ಕೌಟ್ಸ್ ಗೈಡ್ಸ್ ಸಂಸ್ಥೆ, ಆರೋಗ್ಯ ಇಲಾಖೆ,ನೆಹರು ಯುವಕ ಕೇಂದ್ರದ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಇಂದಿನ ಯುವಕರು ದೇಶದ ಆದರ್ಶ ನಾಯಕರ ಜೀವನ ಚರಿತ್ರೆಯನ್ನು ಓದುವ ಮೂಲಕ ಅವರ ಚಿತಂನೆಗಳನ್ನು ಮನಗಾಣಬೇಕು, ವಿಶ್ವಕ್ಕೆ ಭಾರತ್ ದೇಶದ ಶಕ್ತಿ ಹಾಗೂ ಸಂಸ್ಕೃತಿಯನ್ನು ಪರಿಚಯಿಸಿದ ಮಹಾನ್ ವ್ಯಕ್ತಿಯ ದೇಶದ ಅಭಿವೃದಿಗಾಗಿ ಅವರ ಕಂಡ ಕನಸನ್ನು ಇಂದಿನ ಯುವಪೀಳಿಗೆ ಸಾಕಾರಗೊಳಿಸುವ ಮೂಲಕ ದೇಶದ ಋಣವನ್ನು ತೀರಿಸಬೇಕು. ಸದಾ ಲವಲವಿಕೆಯಿಂದ ಧನಾತ್ಮಕವಾಗಿ ತಾವು ಕೈಗೊಳ್ಳುವ ಎಲ್ಲಾ ಕೆಲಸಗಳು ಸಾಕಾರಗೊಳ್ಳಲಿದೆ. ಯುವಶಕ್ತಿ ದೇಶಕ್ಕೆ ಆಸ್ತಿಯಾಗಿ ನಮ್ಮ ದೇಶ್ ಆದಷ್ಟು ಬೇಗನೇ ಅಭೀವೃದ್ದಿ ಹೊಂದಿದ ದೇಶವಾಗಿ ಹೊರಹೊಮ್ಮಲು ಸರ್ಕಾರದ ಯೋಜನೆಗಳಿಗೆ ನಾವು ನೀವು ಕೈ ಜೋಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಾಧಿಕಾರಿಗಳಾದ ಡಾ. ಪ್ರಸನ್ನ ಕುಮಾರ್ ರವರು ಮಾತನಾಡಿ ಇಂದು ಮಾರಕ ಕಾಯಿಲೆಗಳಿಗೆ ಯುವಕರು ಬಲಿಯಾಗುತ್ತಿದ್ದು ತಾವು ಯಾವುದು ಒಳ್ಳೆಯದು , ಯಾವುದು ಕೆಟ್ಟದ್ದು ಎಂಬುದನ್ನು ತಿಳಿದು ಉತ್ತಮ ನಿರ್ಧಾರಗಳನ್ನು ತೆದುಕೊಂಡು ಉತ್ತಮ ಜೀವನಕ್ಕಾಗಿ ಉತ್ತಮ ಆರೋಗ್ಯ ಆದ್ದರಿಂದ ಜೋಷ್‌ಗಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳಬೇಡಿ ಎಂದು ತಿಳಿಸಿದರು.
ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಡಾ. ಮುರಳಿಧರ್ ರವರು ಮಾತನಾಡಿ ವಿದ್ಯಾರ್ಥಿಗಳು ಸಾರ್ವಜನಿಕ ಆಸ್ತಿಯನ್ನು ಸಂರಕ್ಷಣೆ, ಪರಿಸರ ಅಭಿವೃದಿಗಾಗಿ ಗಿಡ ಮರಗಳನ್ನು ಬೆಳೆಸು ಹವ್ಯಾಸವನ್ನು ರೂಡಿಸಿಕೊಂಡು ದೇಶದ ಪ್ರಗತಿಗಾಗಿ ಸದಾ ಸಿದ್ದರಾಗಿರಬೇಕು ಎಂದು ತಿಳಿಸಿದರು. ಈ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್, ಜಿಲ್ಲಾ ಸಹಕಾರ್ಯದರ್ಶಿ ಸ್ಕೌಟ್ ಬಾಬು, ಜಿಲ್ಲಾ ತರಬೇತಿ ಆಯುಕ್ತ ಮುನಿನಾರಾಯಣಪ್ಪ, ಆರೋಗ್ಯ ಇಲಾಖೆಯ ಹೇಮಲತಾ,ಡಾ. ರೇವತಿ, ಡಾ. ಪ್ರಸನ್ನ ಕುಮಾರಿ, ಪ್ರೋ: ಶ್ರೀನಿವಾಸಮೂರ್ತಿ, ಪ್ರೋ: ಮಂಜುನಾಥ್,ಡಾ. ನಾರಾಯಣಪ್ಪ, ಡಾ. ನದೀಮ್, ಕಾಲೇಜಿನ ವಿವಿಧ ಸಮಿತಿಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.