ಯುವಕರು ದುಶ್ಚಟಗಳಿಗೆ ದಾಸರಾಗಬೇಡಿ: ಡಾ.ಪುಷ್ಪ

ವಾಡಿ:ಜೂ.28: ವಿಧ್ಯಾರ್ಥಿ-ಯುವಕರೇ ನಿಮ್ಮ ಭವಿಷ್ಯ ನಿಮ್ಮ ಕೈಯಲಿ ಅಡಗಿದೆ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ದಾಸರಾಗಬೇಡಿ. ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಕಡೆ ಹೆಚ್ಚು ಗಮನಹರಿಸಬೇಕು ಎಂದು ವಾಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪುಷ್ಪ ತಿಳಗೂಳ ಹೇಳಿದರು.

ಪಟ್ಟಣದ ಬಳಿರಾಮಚೌಕ್ ಸರಕಾರಿ ಪ್ರೌಢಶಾಲೆಯಲ್ಲಿ ಆರ್‍ಕೆಎಸ್‍ಎಸ್ ಸಂಸ್ಥೆಯ ಆಯೋಜಿಸಿದ್ದ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ನಿಮ್ಮ ಆರೋಗ್ಯದಲ್ಲಿ ಏರುಪೇರು ಆದರೆ, ಆರ್‍ಕೆಎಸ್‍ಎಸ್ ಸಂಸ್ಥೆಯ ಆಪ್ತ ಸಮಾಲೋಚಕರ ಸಹಾಯ ಪಡೆದುಕೊಳ್ಳಬೇಕು. ಜೀವನದಲ್ಲಿ ಜಿಗುಪ್ಸೆ ಹೊಂದದೆ ಧೈರ್ಯದಿಂದ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಆತ್ಮಾಸ್ಥೈರ್ಯ ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಬಾಬುರಾವ್ ಸಿ.ಬಿ ಮಾತನಾಡಿ, ಹದಿಹರೆಯದವರು ವ್ಯಸನಗಳಿಂದ ದೂರವೀರಬೇಕು. ಆರೋಗ್ಯ ಸ್ಥಿರವಾಗಿರಬೇಕೆಂದರೆ ಕಬ್ಬಿಣಾಂಶಾದ ಮಾತ್ರಗಳನ್ನು ಸೇವಿಸಬೇಕು. ವೈಯಕ್ತಿಕ ಆಲೋಚನಗಳು ಜೀವನದಲ್ಲಿ ಕಾಡತೋಡಗಿದರೆ ಆಪ್ತ ಸಮಾಲೋಚಕರ ಸಲಹೆ ಪಡೆದುಕೊಳ್ಳಬೇಕು ಎಂದರು.

ಚರ್ಮರೋಗ ತಜ್ಞೆ ಡಾ.ತೃಪ್ತಿ ಖತ್ರೆ, ಕೀಲು ಮತ್ತು ಮೂಳೆ ಶಸ್ತ್ರ ಚಿಕಿತ್ಸೆ ತಜ್ಞ ಡಾ.ಪ್ರವೀಣ ಪೋದಾರ, ಪ್ರೌಢಶಾಲೆಯ ಶಾಲೆಯ ಮುಖ್ಯಶಿಕ್ಷಕ ರಾಮಚಂದ್ರ ಪವಾರ್, ಸಹ ಶಿಕ್ಷಕ ಕೃಷ್ಣಾ ಹಾಗೂ ಆಶಾ ಕಾರ್ಯಕರ್ತೆ ವಿಜ್ಜುಬಾಯಿ ಇದ್ದರು. ಶಾಲಾ ವಿದ್ಯಾರ್ಥಿಗಳ ಜೊತೆ ಆಪ್ತ ಸಮಾಲೋಚಕರು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.