ಯುವಕರು ದುಶ್ಚಟಗಳಿಂದ ದೂರಾವಾಗಬೇಕು

ಜಗಳೂರು. ಸೆ.೩; ಯುವಕರು ದುಶ್ಚಟಗಳಿಂದ ದೂರಾಗಿ ಸದೃಢರಾಗಿ ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿಎಸ್ ಎಸ್ ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಸಲಹೆ ನೀಡಿದರು.
ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಸಿಆರ್ ಪಿಎಫ್ ಯೋಧರಾದ ನಾಗರಾಜ್  ಹಾಗೂ ಕೊಡಗು ಜಿಲ್ಲೆ ಸೋಮವಾರಪೇಟೆಯ ವಿಲಿಯಂ ಲೊಬೊ ಅವರ ನಿವೃತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ  ಸನ್ಮಾನಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸರ್ವಧರ್ಮಿಯರು  ವಿವಿಧ ಸಮುದಾಯಗಳು ಸಾಮರಸ್ಯತೆಯಿಂದ ಜೀವನಸಾಗಿಸುತ್ತಿದ್ದು.ಸಂಸ್ಕಾರಕ್ಕೆ ಸಾಕ್ಷಿಯಾಗಿವೆ.ಯಾವುದೇ ಹುದ್ದೆ ಅಲಂಕರಿಸಲು ಶಿಕ್ಷಣ ಬಹುಮುಖ್ಯವಾಗಿದೆ.ಶಿಕ್ಷಣದಿಂದ ಬಡತನ ನಿರ್ಮೂಲನೆ ಸಾಧ್ಯ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ನಿವೃತ್ತ ಯೋಧ ನಾಗರಾಜ್ ಅವರು ಮಾತನಾಡಿ,1981ರಲ್ಲಿ ಜನಿಸಿ ಸಿದ್ದಯ್ಯನಕೋಟೆ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ, ಮಾದಿಹಳ್ಳಿ ಸರ್ಕಾರಿ ಪದವಿಪೂರ್ವಕಾಲೇಜು, ಪ್ರೌಢಶಿಕ್ಷಣ,ನಾಲಂದ ಪದವಿಪೂರ್ವಕಾಲೇಜಿನಲ್ಲಿ ಪಿಯುಸಿ, ಮುಗಿಸಿ
2000 ರಲ್ಲಿ ಸೇವೆಗೆ ಸೇರ್ಪಡೆ ದುರ್ಪುರ್ ವೆಸ್ಟ್ ಬೆಂಗಾಲ್ ಎರಡು ವರ್ಷದ ತರಬೇತಿ ಪಡೆದು   ನಂತರ 2003 ರಲ್ಲಿ ಜಮ್ಮುಕಾಶ್ಮೀರ್,2006 ಅಸ್ಸಾಂ,2008 ರಲ್ಲಿ ಅಯೋಧ್ಯ ರಾಮಮಂದಿರ 2009 ಚತ್ತೀಸ್ ಘಡ್,2010ರಿಂದ 2017 ದೆಹಲಿ,ಪುನಃ,ಜಮ್ಮುಕಾಶ್ಮೀರ್ ದಲ್ಲಿ ನಿವೃತ್ತಿಯಾಗಿ ಯಾವುದೇ ಸಮಸ್ಯೆಗಳಿಲ್ಲದೆ ಮರಳಿ ಸ್ವಗ್ರಾಮಕ್ಕೆ ಆಗಮಿಸಿರುವೆ ನನ್ನನ್ನು  ಗ್ರಾಮಸ್ಥರು ಹರ್ಷೋದ್ಘಾರದಿಂದ ಸ್ವಾಗತಿಸಿದ್ದಕ್ಕೆ ಚಿರ ಋಣಿಯಾಗಿರುವೆ ಎಂದು ಅನುಭವ ವ್ಯಕ್ತಪಡಿಸಿದರು.
ಈಬಸಂದರ್ಭದಲ್ಲಿ ಸಿಆರ್ ಪಿಎಫ್ ಯೋಧ ರಾಘವೇಂದ್ರ  ನಿವೃತ್ತ ಯೋಧ ಜಯದೇವನಾಯ್ಕ, ,ಗ್ರಾ.ಪಂ ಸದಸ್ಯರಾದ ದೇವರಾಜ್,ಜ್ಯೋತಿ ಲಿಂಗಪ್ಪ,ಕೊಟ್ರೇಶ್,ಶರಣಪ್ಪ ಮೇಸ್ತ್ರಿ,ಮಹಮ್ಮದ್ ರಸೂಲ್,ಶರಣಪ್ಪ ಇತರರಿದ್ದರು.