ಯುವಕರು, ದಿನನಿತ್ಯ ಯೋಗ, ಧ್ಯಾನ, ಪೂಜೆ, ಪ್ರಾರ್ಥನೆಯಲ್ಲಿ ತೊಡಗಿ

ಆಳಂದ:ಜ.5:ಬಹು ಸಂಸ್ಕøತಿಯ ನಾಡು ಭಾರತಕ್ಕೆ ಶಾಂತಿ ಸಹಬಾಳ್ವೆ ನೆಮ್ಮದಿಗಾಗಿ ಸರ್ವ ಧರ್ಮೀಯರು ಪ್ರೀತಿ ವಿಶ್ವಾಸದಿಂದ ಒಂದಾಗಿ ಸಹೋದರತ್ವ ಉಳಿಸಿ ಬೆಳೆಸಿಕೊಂಡು ದೇಶದ ಐಕತ್ಯತೆ ಮತ್ತು ಅಖಂಡತೆÀಗೆ ಒತ್ತು ನೀಡಬೇಕಾಗಿದೆ ಎಂದು ಕಲಬುರಗಿಯ ಚರ್ಚ್‍ನ ರೆವಡೆಂಡ್ ಬಿಷಪ್ ರಾಬರ್ಟ್ ಮೈಕೆಲ್ ಮಿರಾಂಡಾ ಅವರು ಹೇಳಿದರು.
ಪಟ್ಟಣದ ಕಲಬುರಗಿ ರಸ್ತೆಯಲ್ಲಿ ಶಾಂತಿವನ್ ಚರ್ಚ ಲೋಕಾರ್ಪಣೆ ಹಾಗೂ ಕ್ರಿಸ್‍ಮಸ್ ಹಾಗೂ 2021ನೇ ಸಾಲಿನ ಹೊಸವರ್ಷದ ಶುಭಾಷಯ ಕೋರುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಎಲ್ಲಾ ಸಮುದಾಯದವರಿಗೂ ಒಬ್ಬೊಬ್ಬರು ದೇವರು ಇದ್ದೇ ಇರುತ್ತಾರೆ. ತಮ್ಮ, ತಮ್ಮ ದೇವರನ್ನು ನೆನೆಯಬೇಕು. ಇಂದಿನ ಯುವಕರು ದಿನನಿತ್ಯ ಯೋಗ, ಧ್ಯಾನ, ಪೂಜೆ, ಪ್ರಾರ್ಥನೆಯಲ್ಲಿ ತೊಡಗಬೇಕು. ಶಾಂತಿವನ್ ಚರ್ಚ್‍ನ ಮೂಲಕ ಪ್ರಾರ್ಥನೆ ಸೇರಿದಂತೆ ಮುಂದಿನ ದಿನಗಳಲ್ಲಿ ಜನಪರÀ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.
ಶರಣಿ ಮಹಾನಂದತಾಯಿ ಮುಗಳಿ ಅವರು ಮಾತನಾಡಿ, ತಾತ್ವಿಕ ನೆಲಕಟ್ಟಿನ ಮೇಲೆ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಾದಿ ಶರಣರು ಒಳಗೊಂಡು ಏಸು, ಬುದ್ಧ ಹೀಗೆ ಹಲವು ಮಹಾನ್‍ದಾರ್ಶನಿಕರ ತೋರಿದ ದಾರಿಯಲ್ಲಿ ಸಾಗಬೇಕು. ಸ್ವ-ಧರ್ಮ ನಿಷ್ಠೆ ಪರಧರ್ಮ ಸಹಿಷ್ಣತೆಯನ್ನು ಮೈಗೂಡಿಸಿಕೊಂಡು ಸೃಷ್ಟಿಯ ನಿಯಮಗಳಿಗೆ ಬದ್ಧರಾಗಿ ನಡೆಯಬೇಕು ಎಂದರು.
ಮುಸ್ಲಿಂ ಧಾರ್ಮಿಕ ಮುಖಂಡ ಮೌಲಾ ಮುಸ್ತಾಕ್ ಅಹ್ಮದ್ ಅವರು ಮಾನಾಡಿ, ಮಥ, ಪಂಥಗಳ ಭೇದ ಮಾಡದೆ ಎಲ್ಲರು ಸೇರಿ ದೇವರು ತೋರಿದ ಮಾರ್ಗದಲ್ಲಿ ಮುನ್ನೆಡೆದು ಸುಂದರ ದೇಶವನ್ನು ಕಟ್ಟಬೇಕಾಗಿದೆ ಎಂದರು.
ಅಪ್ಪಾರಾವ್ ಪಾಟೀಲ, ಧರ್ಮಣ್ಣಾ ಪೂಜಾರಿ ಮತ್ತಿತರು ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ, ಉದ್ಯಮಿ ಸಂತೋಷ ಗುತ್ತೇದಾರ, ಮಹಾದೇವ ವಡಗಾಂವ, ಮಲ್ಲಪ್ಪ ಹತ್ತರಕಿ, ದಯಾನಂದ ಶೇರಿಕಾರ, ಫೀರದೋಸ್ ಅನ್ಸಾರಿ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ, ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಅರವಿಂದ ಗುತ್ತೇದಾರ, ಮೌಲಾ ಮುಲ್ಲಾ, ಪಂಡಿತ ಬಳಬಟ್ಟಿ ಮತ್ತು ಪುರಸಭೆ ಸದಸ್ಯರು ಸೇರಿ ವಿವಿಧ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು.
ಫಾದರ್ ಅನಿಲ್ ಸಿ. ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಫಾಧರ್ ವಿನ್‍ಸೆಂಟ್ ನಿರೂಪಿಸಿದರು. ಈ ಮೊದಲು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.