ಯುವಕರು ಜೆಡಿಎಸ್ ಸೇರ್ಪಡೆ

ಕೋಲಾರ. ಏ೧೨: ಕೋಲಾರ ವಿಧಾನಸಭಾ ಕ್ಷೇತ್ರದ ದಿನ್ನೆಹೊಸಹಳ್ಳಿ ಗ್ರಾಮದ ೫೦ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಮೇಡಿಹಾಳ ಮುನಿರಾಜು ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಯುವಕರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು ಘೋಷಿಸಿರುವ ಪಂಚರತ್ನ ಯೋಜನೆಗಳಲ್ಲಿ ಯುವಕರಿಗೆ ಆಧ್ಯತೆ ಇದ್ದು, ಉಚಿತ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಹಾಗೂ ಕುಮಾರಸ್ವಾಮಿಯವರು ೨೦೦೮ರಲ್ಲಿ ಉತ್ತಮ ಸರ್ಕಾರ ನೀಡಿದ್ದು, ಮತ್ತೊಮ್ಮೆ ಕುಮಾರಸ್ವಾಮಿರವರನ್ನು ರಾಜ್ಯದ ಮುಖ್ಯಮಂತ್ರಿಯಾಗಿಸಲು ಕಂಕಣಬದ್ದರಾಗಿ ಕೋಲಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿಎಂಆರ್ ಶ್ರೀನಾಥ್‌ರವರನ್ನು ಗೆಲ್ಲಿಸಲು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿಕ್ಕಹಸಾಳ ಮಂಜುನಾಥ್, ಬಾಲಗೋವಿಂದ್, ಡೇಂಜರ್ ನಾಗರಾಜ್, ಕಾರ್ತಿಕ್, ಕಿಶೋರ್, ಕೋಟೆ ಮಧು, ಕುವೆಂಪುನಗರ ಆನಂದ್, ಗಂಗಮ್ಮಪಾಳ್ಯ ಶಿವು, ಗಣೇಶ್, ತಾರಕ್ ಮಂಜು, ರವಿಚಂದ್ರ, ದೇವರಾಜ್ ಮುಂತಾದವರು ಉಪಸ್ಥಿತರಿದ್ದರು.