`ಯುವಕರು’ ಚಿತ್ರಕ್ಕೆ ಯು/ಎ

ಡಾ.ಸುಕನ್ಯ ಹಿರೇಮಠ್  ಮತ್ತು ಪವಿತ್ರ ಹಿರೇಮಠ್ ನಿರ್ಮಿಸಿರುವ “ಯುವಕರು” ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣಪತ್ರ  ನೀಡಿದೆ.

ಅಬಕಾರಿ ಇಲಾಖೆಯ ಉಪ ಆಯುಕ್ತ ಡಾ.ಬಿ.ಆರ್. ಹಿರೇಮಠ್ ಮೂಲ ಕಲ್ಪನೆ ಕಥೆಯಾಗಿಸಿ ಡಾ. ಗುಣವಂತ ಮಂಜೂರ್ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ದೇವನಹಳ್ಳಿ, ತಲಕಾಡು, ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ.

ಶ್ರೀಚೇತನ್, ಪವಿತ್ರಾ, ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಾದಕ ವಸ್ತುಗಳ ವ್ಯಸನದಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಮತ್ತು ಯುವಜನತೆ ಇದರಿಂದ ದಾರಿ ತಪ್ಪುತ್ತಿರುವ ಬಗ್ಗೆ ವಿವರಿಸಲಾಗಿದೆ.

ಈ ಚಟಕ್ಕೆ ಬಿದ್ದಾಗ ದೇಶಕ್ಕೂ ಹಾನಿ, ದೇಹಕ್ಕೂ ಹಾನಿ ಉಂಟಾಗುವುದು ಎನ್ನುವ  ಸಂದೇಶ ನೀಡುವ ಕಥೆ ಹೊಂದಿದೆ. ರಂಗಭೂಮಿ ಮತ್ತು ಹೊಸ ಕಲಾವಿದರುಗಳು 50ಕ್ಕೂ ಹೆಚ್ಚು ಜನ ಪಾತ್ರವಹಿಸಿದ್ದಾರೆ. ಈ ಚಿತ್ರಕ್ಕೆ ಬಿ.ಬಲರಾಂ ಸಂಗೀತ, ಬಸಯ್ಯ ಹಿರೇಮಠ್ ಛಾಯಾಗ್ರಹಣವಿದೆ.

ತಾರಾಗಣದಲ್ಲಿ ಶ್ರೀಚೇತನ್, ಪವಿತ್ರಾ ಹಿರೇಮಠ್, ರೋಹಿಣಿ, ಸಿ.ಸೋಮಶೇಖರ್, ಗುಣವಂತ ಮಂಜು, ಚನ್ನಕೇಶವ, ಸಮರ್ಥ, ಶಿವಕುಮಾರ್ ನಾಗರನವಿಲೆ, ಪ್ರದೀಪ್ ಪುಟ್ಟ, ಪುಷ್ಪಲತಾ, ಮಹೇಶ್ ಸಾಗರ, ಬಲಾಮ್, ರುದ್ರಮುನಿ ಮುಂತಾದವರು ಅಭಿನಯಿಸಿದ್ದಾರೆ.