ಯುವಕರು ಅಪರಾಧ ಚಟುವಟಿಕೆಗಳಿಂದ ದೂರ ಇರಿ

ಅಫಜಲಪುರ:ಜು.20:ಈ ಭಾಗ ರಕ್ತಪಾತದಿಂದಾಗಿ ರಾಜ್ಯದಲ್ಲೇ ಭೀಮಾತೀರ ಎಂದೇ ಕುಖ್ಯಾತಿ ಪಡೆದಿದೆ ಹೀಗಾಗಿ ಇಂದಿನ ಯುವಕರು ಇದನ್ನು ಅಳಿಸಿ ಈ ನಾಡಿಗೆ ಒಳ್ಳೆಯ ಸಂದೇಶ ನೀಡಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ ತಿಳಿಸಿದರು.ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಯುವ ಸಮೂಹ ಸಭೆ ಉದ್ದೇಶಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಈ ಬಾರಿ 10 ಕೊಲೆ ಪ್ರಕರಣಗಳು ನಡೆದಿವೆ.ದಿನದಿಂದ ದಿನಕ್ಕೆ ಮತ್ತೆ ಈ ಭಾಗದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತದೆ ಇದನ್ನು ತಡೆಯಲು ಸ್ಥಳೀಯ ಪೆÇಲೀಸ್ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.ಬೀಟ್ ಪೆÇಲೀಸ್ ಕಮಿಟಿಯನ್ನು ಮಾಡಿ ಕೊಲೆ, ಕಳ್ಳತನ, ಅಕ್ರಮ ಸಾರಾಯಿ ಮಾರಾಟ, ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಬೇಕು ಹಾಗೂ ಯುವಕರು ಪೆÇಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದರು.

ಜಿಪಂ ಮಾಜಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಅಫಜಲಪುರ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ, ಸಾರಾಯಿ ಮಾರಾಟ, ಜೂಜಾಟ, ಮಟ್ಕಾ, ಬೆಟ್ಟಿಂಗ್ ದಂಧೆ, ಕೊಲೆ, ಸುಲಿಗೆ ಹಾಗೂ ಇತರೆ ಅಕ್ರಮ ಚಟುವಟಿಕೆಗಳು ತಡೆಗಟ್ಟಬೇಕು.ತಾಲೂಕಿನಲ್ಲಿ ಬೃಹತ್ ಗಾತ್ರದ ಮೂಲಕ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದು, ಅಗತ್ಯಕ್ಕಿಂತ ಹೆಚ್ಚಿನ ಮೂಲ ತೂಕದ ಮರಳನ್ನು ತುಂಬಿಕೊಂಡು ಸಾಗಿಸುತ್ತಿರುವುದರಿಂದ ತಾಲೂಕಿನಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ.ಕರಜಗಿ ಹೋಬಳಿಯು ಸುಮಾರು 22 ಹಳ್ಳಿಗಳು ಒಳಗೊಂಡಿದ್ದು,ಹೋಬಳಿ ಒಟ್ಟು ವಿಸ್ತೀರ್ಣ 86 ಸಾವಿರ ಎಕರೆ ಹೊಂದಿದ್ದು.ಎರಡು ಜಿಪಂ ಕ್ಷೇತ್ರಗಳು ಒಳಗೊಂಡಿವೆ. ಆದ್ದರಿಂದ ಸಾರ್ವಜನಿಕರ ದೃಷ್ಟಿಯಿಂದ ಕರಜಗಿ ಗ್ರಾಮದಲ್ಲಿ ಹೊಸದಾಗಿ ಪೆÇಲೀಸ್ ಸ್ಟೇಷನ್ ನಿರ್ಮಾಣ ಮಾಡುವುದು ಅವಶ್ಯಕತೆವಾಗಿದೆ.ಅದೇ ರೀತಿ ಅಫಜಲಪುರ ಪಟ್ಟಣದಲ್ಲಿ ಹೊಸದಾಗಿ ಟ್ರಾಫಿಕ್ ಪೆÇಲೀಸ್ ಠಾಣೆ ನಿರ್ಮಾಣ ಮಾಡಬೇಕು. ದಿನದಿಂದ ದಿನಕ್ಕೆ ಪಟ್ಟಣವು ಬೆಳೆಯುತ್ತಿರುವುದರಿಂದ ವಾಹನ ಸವಾರರಿಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕರಜಗಿ ಗ್ರಾಮದ ಯುವಕರು ಗೋವಾ ರಾಜ್ಯದಲ್ಲಿ ಕಬಡ್ಡಿ ಪಂದ್ಯಾವಳಿ ಗೆದ್ದು ಬಂದ ಯುವಕರಿಗೆ ಸನ್ಮಾನಿಸಲಾಯಿತು.ಕಾನೂನು ಸುವ್ಯವಸ್ಥೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಯುವ ಸಮಿತಿ ಸಭೆಯಲ್ಲಿ ಯುವಕರಿಗೆ ಅಧಿಕೃತವಾಗಿ ಯುವ ಸಮಿತಿ ಸದಸ್ಯ ಎಂಬ ಲಾಂಛನ ಯುವಕರ ಜೇಬಿಗೆ ವಾಲಿಬಾಲ್ ಕ್ರೀಡಾಂಗಣಕ್ಕೆ ಚಾಲನೆ ನೀಡಿ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಸಾರ್ವಜನಿಕರಲ್ಲಿ ಮೂಡಿಸಿದರು.ಇದೇ ಸಂದರ್ಭದಲ್ಲಿ ಅಭಿಮಾನಿ ಓರ್ವ ಅಲೋಕ್ ಕುಮಾರ ಅವರನ್ನು ಸನ್ಮಾನ ಮಾಡಲು ಬಂದಾಗ ಯುವಕನ ಕೈಯಲ್ಲಿದ್ದ ಹೂವಿನ ಹಾರವನ್ನು ತಾವೇ ಖುದ್ದಾಗಿ ತಮ್ಮ ಕೊರಳಿಗೆ ಹಾಕಿಕೊಂಡು ನಗುತ್ತಾ ಹೊರಟರು.

ಅಲೋಕ್ ಕುಮಾರ ಜತೆ ಗ್ರೂಪ್ ಫೆÇೀಟೋ ತೆಗೆದುಕೊಂಡು ಪೆÇೀಲಿಸ್ ಸಿಬ್ಬಂದಿ
ಅಫಜಲಪುರ ಪಟ್ಟಣದ ಪೆÇೀಲಿಸ್ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ ಮಂಗಳವಾರ ಭೇಟಿ ಹಿನ್ನಲೆಯಲ್ಲಿ ಕಳೆದ ನಾಲ್ಕು ಐದು ದಿನಗಳಿಂದ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು ಪೂರ್ವ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ವಾಲಿಬಾಲ್ ಕ್ರೀಡಾಂಗಣ, ಸಸಿ ನೆಡುವುದು ಸೇರಿದಂತೆ ಇತರೆ ಸಿದ್ಧತೆಗಳನ್ನು ನಡೆಸಿದರು.ಠಾಣೆ ಆಗಮಿಸುತ್ತಿದ್ದಂತೆ ಗೌರವ ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಈಶಾನ್ಯ ವಲಯ ಐಜಿಪಿ ಮನೀಶ್ ಖರ್ಬಿಕರ್, ಪೆÇೀಲಿಸ್ ವರಿಷ್ಠಾಧಿಕಾರಿ ಇಶಾ ಪಂತ್, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಪ್ರಸನ್ನ ಕುಮಾರ್ ದೇಸಾಯಿ, ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಜಗದೇವಪ್ಪ ಪಾಳಾ, ಪಿಎ???ಗಳಾದ ಸುರೇಶ್ ಕುಮಾರ ಚವ್ಹಾಣ, ರಾಜಶೇಖರ್ ರಾಠೋಡ,ಗಂಗಾಮ್ಮ ಜಿನ್ನಿಕೇರಿ, ದೇವಿಂದ್ರ ರೆಡ್ಡಿ,ಪೆÇೀಲಿಸ್ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.