ಯುವಕರಿಗೆ ಸಿನೇಮಾ ಹೀರೋಗಳಲ್ಲ,ಭೋಸ್, ಭಗತಸಿಂಗ ಆದರ್ಶರಾಗಬೇಕು

ಶಹಾಬಾದ:ಎ.5:ಯುವಕರಲ್ಲಿ ಉನ್ನತ ನೀತಿ, ಆದರ್ಶಗಳನ್ನು ಬೆಳೆಸಬೇಕಾದ ಸಿನೇಮಾಗಳೂ ಇಂದು ಆಶ್ಲೀಲತೆ, ರಕ್ತಪಾದ, ಕ್ರೂರತೆ, ಅಟ್ಟಹಾಸವನ್ನು ತೋರಿಸುವ ಮೂಲಕ ಯುವಕರಿಗೆ ದಾರಿ ತಪ್ಪಿಸುತ್ತಿವೆ. ಇಂದು ಯುವಕರಿಗೆ ಸಿನೇಮಾ ಹೀರೋಗಳು ಆದರ್ಶರಾಗದೆ. ಸುಭಾಶ್ಚಂದ್ರ ಭೋಸ್, ಭಗತ್ ಸಿಂಗ್ ಅಂತಹವರು ಆದರ್ಶರಾಗಬೇಕು ಎಂದು ಎಐಎಮ್‍ಎಸ್‍ಎಸ್ ಜಿಲ್ಲಾ ಅಧ್ಯಕ್ಷ ಗುಂಡಮ್ಮಾ ಮಡಿವಾಗಳ ಹೇಳಿದರು.

ಅವರು ಭಾನುವಾರ ನಗರದ ಎಐಡಿಎಸ್‍ಒ, ಎಐಡಿವೈಒ, ಎಐಎಮ್‍ಎಎಸ್‍ಎಸ್ ವತಿಯಿಂದ ಆಯೋಜಿಸದ್ದ ಕ್ರಾಂತಿಕಾರಿ ಶಹೀದ್ ಭಗತ ಸಿಂಗ್ ಅವರು 92ನೇ ಹುತಾತ್ಮ ದಿನಾಚರಣೆ ನಿಮಿತ್ತ ಸಂಜೆ ರೈಲು ನಿಲ್ದಾಣದ ಬಳಿ ನಡೆದ ಪಂಜಿನ ಮರೆವಣಿಗೆ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಎಸ್‍ಯುಸಿಐಸಿ ಕಾರ್ಯದರ್ಶಿ ಗಣಪತರಾವ ಮಾನೆ, ಎಐಕೆಕೆಎಮ್‍ಎಸ್ ರಾಜೇಂದ್ರ ಆತ್ನೂರ, ಎಐಡಿವೈಒ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಎಚ್.ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ಸಿದ್ದು ಚೌಧರಿ ಮಾತನಾಡಿದರು.

ಸಂಜೆ ಬಸವೇಶ್ವರ ವೃತ್ತದ ಬಳಿ ಗಣ್ಯರಾದ ರಮೇಶ ಪವಾರ ಭಗತಸಿಂಗ ಭಾವಚಿತ್ರಕ್ಕೆ ಮಾಲಾರ್ಪನೆ ಮಾಡಿ, ಪಂಜಿನ ಮೆರವಣಿಗೆ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಮಹಾದೇವಿ ಮಾನೆ, ನೀಲಕಂಠ ಹುಲಿ, ರಘು ಪವಾರ, ರಮೇಶ ದೇವಕರ್, ಆನಂದ, ಮಹಾದೇವಿ ಆತ್ನೂರ, ರಾಧಿಕಾರ ಚೌಧರಿ, ತೇಜಸ್ ಇಬ್ರಾಹಿಂಪೂರ, ಅಜಯ ಗುರುಜಾಲಕರ್, ಸೇರಿದಂತೆ ವಿದ್ಯಾರ್ಥಿಗಳು, ಯುವಕರು ಪಾಲ್ಗೊಂಡಿದ್ದರು. ಕಿರಣ ಮಾನೆ ಅಧ್ಯಕ್ಷತೆ ವಹಿಸಿದ್ದರು. ಪಂಜಿನ ಮೆರವಣಿಗೆ ಬಸವೇಶ್ವರ ವೃತ್ತದಿಂದ ಮುಖ್ಯ ರಸ್ತೆ ಮೂಲಕ ರೈಲು ನಿಲ್ದಾಣ ತಲುಪಿ ಸಮಾರೋಪಗೊಂಡಿತು.