ಯುವಕರಿಗೆ-ವಿದ್ಯಾರ್ಥಿಗಳಿಗೆ ಕಾನೂನಿನ ಬದ್ಧತೆ ಇರಬೇಕು : ರಾಜಶೇಖರ ವಿ. ಪಾಟೀಲ್

ವಿಜಯಪುರ: ನ.18:ಒಂದುದೇಶದ ಪ್ರಗತಿಯಲ್ಲಿ ಆ ದೇಶದ ಶಿಕ್ಷಣ ಹಾಗೂ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಕಾನೂನಿನ ಪಾಲನೆ ಮುಖ್ಯ. ಇಂದಿನ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾನೂನಿನ ಬದ್ಧತೆಇರಬೇಕು. ಕಾನೂನು ಇರುವದೆ ಸುರಕ್ಷತೆಗಾಗಿ. ಪ್ರತಿಯೋಬ್ಬರುಕಾನೂನನ್ನು ಪಾಲಿಸುವದು ಅವಶ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕುಲಸಚಿವ ರಾಜಶೇಖರ ವಿ. ಪಾಟೀಲ್ ಹೇಳಿದರು.
ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯವು ಐ.ಕ್ಯು.ಎ.ಸಿ. ಸಹಯೋಗದಲ್ಲಿ ಯುವಜನತೆ ಹಾಗೂ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ‘ಕಾನೂನು ಅರಿವುಕುರಿತು ಪ್ರೇರಣಾತ್ಮಕ ಉಪನ್ಯಾಸ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ವ್ಯಕ್ತಿಯಜನನದಿಂದ ಹಿಡಿದು ಸಾವಿನ ವರೆಗೆ ಹಾಗೂ ಸಾವಿನ ನಂತರವು ಕಾನೂನು ಅನ್ವಯವಾಗುತ್ತದೆ. ಕಾನೂನಿನ ಬಗ್ಗೆ ತಿಳಿದೂ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ವಿಷಾದನೀಯ. ಕಾನೂನು ಇರುವುದೇ ಜನರಿಗಾಗಿ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ. ಎಸ್. ಜಿರೊಡಗಿ ಮಾತನಾಡಿ ಎಷ್ಟೋ ವಾಹನ ಸವಾರರು ಚಾಲನಾ ಪರವಾಣಿಗೆ ಇಲ್ಲದೇ, ವಾಹನ ವಿಮೆ ಇಲ್ಲದೆ ವಾಹನವನ್ನು ಉಪಯೋಗಿಸುತ್ತಿರುವದು ಕಾನೂನಿಗೆ ವಿರುದ್ದ. ಅವಶ್ಯಕ ಚಾಲನಾ ಪರವಾನಿಗೆ, ವಾಹನ ವಿಮೆ ಹಾಗೂ ವಾಹನ ನೋಂದಣಿಗೆ ಸಂಬಂದಿಸಿದ ದಾಖಲೆಗಳನ್ನು ಹೊಂದಿರಿವುದು ಸೂಕ್ತ. ಹಾಗೂ ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿ ಕಾನೂನನ್ನು ಸದುಪಯೋಗ ಮಾಡಿಕೊಂಡು ಉತ್ತಮ ಸಮಾಜ ನಿರ್ಮಿಸಬೇಕು ಎಂದರು.
ಡಾ. ಭಾರತಿ ಹಿರೇಮಠ, ಡಾ. ಭಕ್ತಿ ಮಹಿಂದ್ರಕರ, ಪ್ರೊ. ಎಸ್. ಎ. ಪಾಟೀಲ, ಪ್ರೊ. ಆರ್. ಎಸ್. ಚವ್ಹಾಣ, ಪ್ರೊ. ವಿ.ಎಸ್. ತಳವಾರ ವೇದಿಕೆ ಮೇಲಿದ್ದರು. ಇದೆ ಸಂದರ್ಬದಲ್ಲಿ ವಿದ್ಯಾರ್ಥಿಗಳು ಕಾನೂನಿನ ಕುರಿತು ಸಂವಾದವನ್ನು ನಡೆಸಿದರು.
ಪ್ರೊ. ಪಿ.ಎಚ್. ಕುಂಬಾರ ಸ್ವಾಗತಿಸಿದರು, ಎಸ್.ಎಸ್. ಕನ್ನೂರ ನಿರೂಪಿಸಿದರು, ಪ್ರೊ. ಪಿ.ಎಸ್. ತೊಳನೂರ ವಂದಿಸಿದರು. ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು