ಯುವಕರಿಗೆ ಮಾತುಕೊಟ್ಟಂತೆ ನಡೆದುಕೊಂಡಿರುವೆ- ರಾಜಾ ವೆಂಕಟಪ್ಪ ನಾಯಕ

ಸಿರವಾರ.ಸೆ.೧೯- ಚುನಾವಣೆಯಲ್ಲಿ ಯುವಕರಿಗೆ ಕ್ರೀಡಾಂಗಣ ನಿರ್ಮಾಣ ಮಾಡುತ್ತೆನೆ ಎಂದು ಆಶ್ವಾಸನೆ ನೀಡಿದಂತೆ ಪಿಡಬ್ಲ್ಯೂಡಿ ಇಲಾಖೆಯಿಂದ ಕ್ರೀಡಾ ಇಲಾಖೆಗೆ ಸ್ಥಳ ಹಸ್ತಾಂತರ ಕಾರ್ಯವಾಗಿ ಪ್ರಥಮ ಹೆಜ್ಜೆಯನ್ನು ಮುಟ್ಟಿದೆವೆ, ಕ್ರೀಡಾಂಗಣ ನಿರ್ಮಾಣವವರೆಗೂ ವಿರಮಿಸುವುದಿಲ, ಯುವಕರೊಂದಿಗೆ ನಾನು ಸದಾ ಇರುತ್ತೆನೆ ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ಕ್ರೀಡಂಗಣಕ್ಕಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾಕ್ಕಾಗಿ ಮಾನ್ವಿಯಲ್ಲಿ ಸಿರವಾರ ತಾಲೂಕ ಯುವಕರಿಂದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ದೂರೆ ಅವರಿಗೆ ಸನ್ಮಾನಿಸಿದರು. ನಂತರ ಮಾತನಾಡಿದ ಅವರು ಯುವಕರ ಬಹು ದಿನದ ಬೇಡಿಕೆಯಾದ ಕ್ರೀಡಾಂಗಣ ನಿರ್ಮಾಣ ಮಾಡುತ್ತೆನೆ ಎಂದು ಹೇಳಿದೆ ಅದರಂತೆ ನಡೆದುಕೊಂಡಿರುವೆ ಎಂದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಹಿರಿಯ ಮುಖಂಡರಾದ ಲೋಕರೆಡ್ಡಿ ಗೌಡ, ನೌಕರ ಸಂಘದ ಅಧ್ಯಕ್ಷ ಅಯ್ಯನಗೌಡ ಏರೆಡ್ಡಿ . ನಾಗರಾಜ್ ಗೌಡ.ದಾನಪ್ಪ, ಗ್ಯಾನಪ್ಪ .ಚಂದ್ರಶೇಖರ ಗೌಡ ದೇವರಾಜ್ ಗೌಡ.ಬಸವರಾಜ ಗೌಡ.ಜಾಡಲದಿನ್ನಿ, ಶಿವಾನಂದಸ್ವಾಮಿ, ವಲಿಗುತ್ತೆದಾರ ಸೇರಿದಂತೆ ಇನ್ನಿತರರು ಇದ್ದರು.