ಯುವಕರಿಗೆ ಉದ್ಯೋಗ ಸೃಷ್ಟಿಸಲು ಉದ್ಯಮಗಳನ್ನು ಪ್ರಾರಂಭಿಸಿ

ಬಾಗಲಕೋಟೆ,ನ.3 : ಡಾ|| ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ, ನಂಜುಡಪ್ಪ ವರದಿಯನ್ನು ರಾಜ್ಯದ ಅಭಿವೃದ್ಧಿಯಲ್ಲಿ ಅಸಮಾನತೆ ತೊಲಗಿಸಲು ಶೈಕ್ಷಣಿಕ , ಸಾಮಾಜಿಕ, ಆರ್ಥಿಕ ಕ್ಷೇತ್ರಗಳಿಗೆ ಹೆಚ್ಚು ಒತ್ತುಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು. ಜಿಲ್ಲೆಗೆ ಮಂಜೂರಾದ ಸರಕಾರಿ ವೈದ್ಯಕೀಯ ಕಾಲೇಜನ್ನು ರಾಜ್ಯ ಸರ್ಕಾರ ಅತೀ ಶೀಘ್ರ ಪ್ರಾರಂಭ ಮಾಡಬೇಕು. ಮತ್ತು ಜಿಲ್ಲೆಯಲ್ಲಿ ನಿರುದ್ಯೋಗಿಯಾಗಿರುವ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡಲು ಜಿಲ್ಲೆಯಲ್ಲಿ ಉದ್ಯಮಗಳನ್ನು ಪ್ರಾರಂಭ ಮಾಡಬೇಕು ಎಂದು ಜಿಲ್ಲಾ ಕರವೇ ಅಧ್ಯಕ್ಷ ರಮೇಶ ಬದ್ನೂರ ಹೇಳಿದರು.
ಅವರು ನಗರದ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕೊರೊನಾ ಯೋಧರಿಗೆ (ವಾರಿಯರ್ಸ್) ಕೃತಜ್ಷತಾರ್ಪಣೆ ಹಾಗೂ ಗಾಯನ ಲೋಕದ ದಿಗ್ಗಜ ದಿ.ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಗಾನ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸದಾ ಒಂದಿಲ್ಲೊಂದು ಕಾರ್ಯಕ್ರಮವನ್ನು ಏರ್ಪಡಿಸುತ್ತಾ, ರೈತರಿಗೆ ಅನ್ಯಾಯವಾದಾಗ ರೈತರ ಪರವಾಗಿ ಹೋರಾಟ ಮಾಡಿ ಅವರಿಗೆ ದೈರ್ಯತುಂಬುವ ಕೆಲಸವನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರಲ್ಲದೇ, ನಾಡು-ನುಡಿ ಜಲ, ಸಂರಕ್ಷಣೆಗೆ ಸದಾ ಟೊಂಕ ಕಟ್ಟಿ ನಿಲ್ಲುತ್ತೇವೆ ಎಂದು ಹೇಳಿದರು.
ಉದ್ಘಾಟನೆ ನರೆವೇರಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಡಾ||ಎಂ.ಪಿ. ನಾಡಗೌಡ ಮಾತನಾಡಿ ಕನ್ನಡ ಭಾಷೆ, ಸಂಸ್ಕøತಿ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು. ಕಳೆದ 50 ವರ್ಷಗಳಿಂದ ಕನ್ನಡ ಸಂಘದ ತೇರನ್ನು ಹಿರಿಯರು ಎಳದುಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಯುವಕರು ಸಜ್ಜಾಗಬೇಕು. ಕೇವಲ ಕರವೇ ಕಾರ್ಯಕರ್ತರು ಕನ್ನಡ ನಾಡಿನ ರಕ್ಷಣೆಯನ್ನು ಮಾಡಿದರೆ ಸಾಲದು ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲ ರಮೇಶ ಬದ್ಬೂರ ಕಾರ್ಯಕ್ಕೆ ಕೈಜೋಡಿಸಿ ಕನ್ನಡ ನಾಡಿನ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಸಿದ್ದನಕೊಳ್ಳದ ಸಿದ್ದಶ್ರೀ ಮಠದ ಪರಮಪೂಜ್ಯ ಡಾ.ಶಿವಕುಮಾರಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಉತ್ತರ ಕರ್ನಾಟಕದ ಹಲವಾರು ಪ್ರತಿಭೆಗಳನ್ನು ಗುರುತಿಸಿ ಚಲನಚಿತ್ರ ರಂಗಕ್ಕೆ ಸೇರ್ಪಡೆ ಮಾಡಿದ ಏಕೈಕ ಮಠ ಅದು ಸಿದ್ದನಕೊಳ್ಳದ ಸಿದ್ದಶ್ರೀ ಮಠ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಅವರು ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟು ಜನಮಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವಪ್ರಭು ಸರನಾಡನಾಡಗೌಡ ಮಾತನಾಡಿ, ರಮೇಶ ಬದ್ನೂರ ಅವರು ಕೇವಲ ಕನ್ನಡ ನಾಡಿನ ರಕ್ಷಣೆ ಮಾತ್ರವಲ್ಲದೆ ಜಿಲ್ಲೆಯ ರೈತರಿಗೆ ಕಾರ್ಮಿಕರಿಗೆ ಅನ್ಯಾಯವಾದಾಗ ಅವರ ಪರವಾಗಿ ಹೋರಾಟ ಮಾಡಿ ವಿರೋಧ ಪಕ್ಷದಂತೆ ಕೆಲಸ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಸೋಂಪೂರ ಮಾತನಾಡಿ ನಮ್ಮ ಭಾಷೆಯು ಪ್ರಾಚೀನವಾದ ಭಾಷೆಯಾಗಿದ್ದು, ಇಂದು ಕರ್ನಾಟಕದಲ್ಲಿ ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆಗೆ ಗಂಡಾಂತರ ಬಂದೊದಗಿದೆ. ನಮ್ಮ ಜನರು ಕನ್ನಡ ಭಾಷೆ ಉಳಿಸಿ ಬೆಳೆಸಲು ಪ್ರತಿಯೊಬ್ಬರಲ್ಲಿ ಕನ್ನಡದ ಭಾಷಾಭಿಮಾನ ಹೊಂದಬೇಕಿರುವುದು ಇಂದು ಅತ್ಯವಶ್ಯವಾಗಿದೆ ಎಂದು ಹೇಳಿದರಲ್ಲದೇ ಸಮಾರಂಭದಲ್ಲಿ ಮಹಾಮಾರಿ ಕೊರೊನಾ ರೋಗದ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ವೈದರು, ಆರಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ ಹಾಕಿಕೊಂಡಿರುವುದನ್ನು ಶ್ಲಾಘಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ವೈದ್ಯರಾದ ಡಾ|| ಸೊನ್ನದ, ಜಿಲ್ಲಾ ಆರೋಗ್ಯಾಧಿಕಾರಿ ಅನಂತ ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಪ್ರಕಾಶ ಬಿರಾದಾರ ವಿಶೇಷ ಆಹ್ವಾ£ತರಾಗಿ ಆಗಮಿಸಿ ಮಾತನಾಡಿದರು.
ಸಮಾರಂಭದಲ್ಲಿ ಕರವೇ ಯುವ ಘಟಕದ ಧಾರವಾಡ ಜಿಲ್ಲಾಧ್ಯಕ್ಷ ಸಾಗರ ಗಾಯಕವಾಡ, ಕರವೇ ಧಾರವಾಡ ಜಿಲಾಧ್ಯಕ್ಷ ರುದ್ರೇಶ ಹೆಳವರ, ರಾಜ್ಯ ಸಂಚಾಲಕ ಹನಮಂತಪ್ಪ ಮೇಟಿ, ಹನಮಂತ ಅಬ್ಬಗೇರಿ, ಪ್ರಕಾಶ ಮುಧೋಳ, ಪತ್ರಕರ್ತ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಆನಂದ ಜಿಗಜಿ£್ನ, ಬಿಜೆಪಿಯ ಯುವ ಮುಖಂಡ ಸಂತೋಷ ಹೊಕ್ರಾಣಿ, ನಗಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, £ರ್ದೇಶಕ ರಾಜು ನಾಯ್ಕರ, ಕರವೇ ಕಾರ್ಯಕರ್ತರಾದ ಬಸವರಾಜ ಅಂಬಿಗೇರ, ಬಸವರಾಜ ಧರ್ಮಂತಿ, ಆತ್ಮಾರಾಮ £ೀಲನಾಯಕ, ಮಲ್ಲು ಕಟ್ಟಿಮ£, ವಿನೂತ ಮೇಲಿನಮ£, ರವಿ ಅಂಗಡಿ, ಶ್ರೀಮತಿ ಭಾಗ್ಯಾ ಬೆಂಡಿಗೇರಿ, ಸವಿತಾ ಹಿರೇಮಠ, ಜಗದೀಶ ಬಸರಿಗಿಡದ, ಸಂತೋಷ ರಾಠೋಡ, ದೇವೇಂದ್ರ ಅಸ್ಕಿ, ಈರಣ್ಣ ಅಂಬಿಗೇರ, ಗಣಪತಿ ಭೋವಿ, ಡೊಂಗ್ರಿಸಾಬ ನದಾಫ, ಚಿದಾನಂದ ಧರ್ಮಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಶ್ರೇಯಾಂಕ್ ಕೋಲಾರ £ರೂಪಿಸಿ ಕೊನೆಯಲ್ಲಿ ವಂದಿಸಿದರು.
ಸಮಾರಂಭದಲ್ಲಿ ಮಹಾಮಾರಿ ಕೊರೊನಾ ರೋಗದ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ವೈದರು, ಆರಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರಿಗೆ ಸನ್ಮಾ£ಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಂತರ ಸೂಳೇಭಾವಿಯ ಪಿ.ದೀಕ್ಷಿತ ಮೆಲೋಡಿಸ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.