ಯುವಕರಿಗೆ ಉದ್ಯಮಶೀಲತೆ ತರಬೇತಿ ಸಹಕಾರಿ: ಎಸ್.ಬಿ.ಬಳ್ಳಾರಿ

ಇಂಡಿ:ಮಾ.30: ತಾಲೂಕಿನ ಯುವ ಜನತೆ ಯೋಗ್ಯ ಉದ್ಯೋಗಾವಕಾಶಗಳನ್ನು ಕಂಡು ಕೊಳ್ಳಲು ಅಗತ್ಯವಿರುವ ಕೌಶಲ್ಯ ಮತ್ತು ಪರಿಣತಿಯನ್ನು ಪಡೆದುಕೊಳ್ಳಲು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ತರಬೇತಿ ಸಹಕಾರಿಯಾಗಿದೆ ಎಂದು ಬಾಗಲಕೋಟದ ಸಿಡಾಕ್ ಜಂಟಿ ನಿರ್ದೇಶಕಿ ಶ್ರೀಮತಿ ಎಸ್.ಬಿ.ಬಳ್ಳಾರಿ ಹೇಳಿದರು.

ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ವೀರಶೈವ ಕಕ್ಕಯ್ಯಾ ಯುವಕ ಸಂಘ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಸಿಡಾಕ್ ಧಾರವಾಡ,ರೇವಣ ಸಿದ್ದೇಶ್ವರ ಶಿಕ್ಷಣ ಸಂಸ್ಥೆ ಮತ್ತು ವೀರಶೈವ ಕಕ್ಕಯ್ಯ ಯುವಕ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮೂರು ದಿನಗಳ ಉಧ್ಯಮಶೀಲತಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೀರಶೈವ ಕಕ್ಕಯ್ಯ ಯುವಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಇಂಗಳೆ ಮಾತನಾಡಿ ನುರಿತ ಮಾನವ ಶಕ್ತಿಯ ಬೇಡಿಕೆ ಮತ್ತು ಪೂರೈಕೆಯ ನಡುವಿನ ಸಂಪರ್ಕವನ್ನು ತೆಗೆದುಹಾಕುವದು ಹೊಸ ಕೌಶಲ್ಯ ಮತ್ತು ನವೀನ ಚಿಂತನೆಗಳನ್ನು ಅಸ್ತಿತ್ವದಲ್ಲಿರುವ ಉದ್ಯೋಗಿಗಳಿಗೆ ಮಾತ್ರವಲ್ಲದೆ ಸೃಷ್ಠಿಸಬೇಕಾದ ಉದ್ಯೋಗಿಗಳಿಗೂ ನಿರ್ಮಿಸುವ ಗುರಿ ಹೊಂದಿದೆ ಎಂದರು.

ಉದ್ಯಮದಾರ ಶ್ರೀಪಾದ ಜೋಶಿ,ಕಲಬುರ್ಗಿಮನು ಹೋಮ ಪ್ರೋಡಕ್ಟ ಭೀಮು,ದೀಪಾ ಚೋಪಡೆ,ಜಿ.ಎಂ. ಬಡಾನವರ ಮಾತನಾಡಿದರು.

ಸಿಡಾಕ್ ವಿಜಯಪುರದ ಸರಸ್ವತಿ ಎಸ್. ಖ್ಯಾಡಿ ತರಬೇತಿ ನೀಡಿದರು.

ಇಂಡಿಯ ವಿವಿಧ ಟ್ರೇನಿಂಗ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ 60 ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.