ಯುವಕರಿಗೆ ಆರೋಗ್ಯ ಮಾರ್ಗದರ್ಶನ ಅಗತ್ಯ: ಯದುವೀರ

ಸಂಜೆವಾಣಿ ನ್ಯೂಸ್
ಮೈಸೂರು : ಆ.14:- ಪ್ರಸ್ತುತ ಸಂದರ್ಭದಲ್ಲಿ ಯುವಕರಿಗೆ ಆರೋಗ್ಯ ಮಾರ್ಗದರ್ಶನ ಅಗತ್ಯ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಲಾಮಂದಿರದಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಆರೋಗ್ಯ, ಯೋಗಕ್ಷೇಮ ಮತ್ತು ಕ್ರೀಡೆಗಳು ಕುರಿತು ಯುವ ಪೀಳಿಗೆಗಾಗಿ ಒಂದು ವಿಶೇಷ ಕಾರ್ಯಸೂಚಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಅರಮನೆ ಹಾಗೂ ಬ್ರಹ್ಮ ಕುಮಾರೀಸ್ ನಡುವೆ ಉತ್ತಮ ನಂಟಿದೆ. ಈ ಹಿಂದೆ ನಾನು ಮೌಂಟ್ ಅಬು ಕೇಂದ್ರಕ್ಕೆ ಭೇಟಿ ನೀಡಿz?ದÉ. ಅಲ್ಲಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದೆ. ಈ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮ ನಡೆಸಲು ಮೈಸೂರು ಸೂಕ್ತ ಸ್ಥಳ ಎನಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಮೈಸೂರು ಹೆಸರು ವಾಸಿಯಾಗಿದೆ. ಭಾರತೀಯ ಪಾರಂಪರಿಕತೆ ಸಾರುವ ಆಯುರ್ವೇದ ಕಾಲೇಜು ಇಲ್ಲಿದೆ ಎಂದರು.
ಜನರ ಯೋಗಕ್ಷೇಮ ನೋಡಿಕೊಳ್ಳಬೇಕು. ಯೋಗಕ್ಕೆ ಮೈಸೂರೇ ತಳಹದಿ, ಯೋಗ ಮತ್ತು ತತ್ತ್ವಶಾಸ್ತ್ರವನ್ನು ಸಂಸ್ಕøತ ಪಾಠಶಾಲೆಯಲ್ಲಿ ಹಿಂದೆ ಹೇಳಿಕೊಡಲಾಗುತ್ತಿತ್ತು. ಹಾಗಾಗಿ ಇದು ಮೈಸೂರಿನಲ್ಲಿ ಸೂಕ್ತವಾದ ಕಾರ್ಯಕ್ರಮ. ಯುವಕರಿಗೆ ಇದರಿಂದ ಒಳ್ಳೆಯದಾಗುತ್ತದೆ ಎಂದು ಅವರು ಹೇಳಿದರು.
ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್ ಮಾತನಾಡಿ, ಶಾಂತಿಯುತ ಸ್ವಸ್ಥ ಸಮಾಜ ನಿರ್ಮಾಣ ಆಗಬೇಕು. ಯುವಕರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕು. ಸುಸ್ಥಿರ ಅಭಿವೃದ್ಧಿ ಹಾಗೂ ಜಾಗತಿಕ ತಾಪಮಾನಕ್ಕೆ ಪರಿಹರ ಕಂಡುಕೊಳ್ಳಬೇಕು ಎಂದು ಅವರು ತಿಳಿಸಿದರು.
ಈಶ್ವರೀಯ ವಿವಿ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ಮಾತನಾಡಿ, ಭಾರತದ ಯುವಕರ ಸಂಖ್ಯೆ ಅರ್ಧದಷ್ಟಿದೆ. ಭಾರತದ ಭವಿಷ್ಯ ಸುಭದ್ರವಾಗಿದೆ. ಯುವಕರಿಗೆ ಸೌಲಭ್ಯದ ಜತೆಗೆ ಬೆಂಬಲ ಬೇಕಿದೆ. ಎಲ್ಲರೂ ಒಳ್ಳೆಯ ಬದುಕನ್ನು ಬದುಕಬೇಕು.
ಒತ್ತಡ, ಭಯ, ಆಯಾಸ ಎ¯?ಲÁ ಇದೆ. ಆದರೆ, ಸಕಾರಾತ್ಮಕ ಚಿಂತನೆಯ ಬದುಕು ನಮ್ಮದಾಗಬೇಕು. ಎಲ್ಲರ ಜೀವನದಲ್ಲಿ ನಕಾರಾತ್ಮಕತೆ ಇದೆ. ಪರಸ್ಪರ ಸಂಬಂಧಗಳಲ್ಲಿ ಒಡಕಿದೆ.
ಇದೆಲ್ಲದರಿಂದ ದೂರವಾಗಲು ಮನಸ್ಸಿನ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಎಲ್ಲಾ ವಿಷಯದಲ್ಲಿಯೂ ಸಕಾರಾತ್ಮಕವಾಗಿರಬೇಕು ಎಂದರು.
ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ಮೊದಲಾದವರು ಇದ್ದರು.