ಯುವಕರಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯ: ಸುಭಾಷ ಬಣಗಾರ

ಕಲಬುರಗಿ:ಸೆ.4: ಇಂದಿನ ಯುವಕರು ಪ್ರವಚನ ಪುರಾಣಗಳನ್ನು ಕೇಳುವ ಮೂಲಕ ತಮ್ಮ ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಸುಭಾಷ ಬಣಗಾರ ಅವರು ಹೇಳಿದರು.

ಶ್ರಾವಣ ಮಾಸ ನಿಮಿತ್ತ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಯನಗರ ಶಿವಮಂದಿರದಲ್ಲಿ ಹಮ್ಮಿಕೊಂಡಿರುವ ಶಿವ ಧರ್ಮ ಆಧ್ಯಾತ್ಮಿಕ ಪ್ರವಚನದ 16ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೊಬೈಲ್ ಹಾವಳಿಯಿಂದ ಯುವಕರು ಮೂಲ ಸಂಸ್ಕøತಿ, ಸಂಸ್ಕಾರವನ್ನು ಮರೆಯುತ್ತಿದ್ದಾರೆ.ಗುರು,ಹಿರಿಯರಿಗೆ ಗೌರವ ತೊರುತ್ತಿಲ್ಲ.ಅವರನ್ನು ಆಧ್ಯಾತ್ಮದ ಕಡೆಗೆ ಬೆಳೆಯಬೇಕಾದರೆ ಇಂಥಹ ಪ್ರವಚನ, ಪುರಾಣಗಳು ಎಲ್ಲೆಡೆ ನಡೆಯಬೇಕು.ಜೊತೆಗೆ ಶರಣರ ಚಿಂತನೆಗಳು ಸಾರುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಪ್ರವಚಕಾರ ಶರಣ ಶ್ರೀ ಶಿವಶಂಕರ ಬಿರಾದಾರ ಅವರು ಪ್ರವಚನ ನಡೆಸಿಕೊಟ್ಟರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ, ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ, ಸಹ ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಸದಸ್ಯರಾದ ಬಸವರಾಜ ಅನ್ವರಕರ, ಎಸ್.ಡಿ.ಸೇಡಂಕರ,ಮನೋಹರ ಬಡಶೇಷಿ, ನಾಗರಾಜ ಖೂಬಾ,ವೀರಪ್ಪ ಹುಡುಗಿ, ಬಸವರಾಜ ಪುರ್ಮಾ,ವಿನೋದ ಪಾಟೀಲ, ಮಲ್ಲಯ್ಯ ಸ್ವಾಮಿ ಬೀದಿಮನಿ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಅನಿತಾ ನವಣಿ, ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ, ಲತಾ ತುಪ್ಪದ, ವಿಜಯಲಕ್ಷ್ಮಿ ಪುರ್ಮಾ, ಶಕುಂತಲಾ ಮರಡಿ ಸೇರಿದಂತೆ ವಿವಿಧ ಬಡಾವಣೆಗಳ ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.