ಯುವಕರಿಗೂ ಲಸಿಕೆ ಸರ್ಕಾರ ಚಿಂತನೆ

ಬೆಂಗಳೂರು, ಏ.೮- ರಾಜ್ಯದಲ್ಲಿ ಇತ್ತೀಚಿಗೆ ಕೊರೊನಾ ಸೋಂಕಿಗೆ ಹೆಚ್ಚಾಗಿ ಯುವಕರೇ ಗುರಿಯಾಗುತ್ತೀರುವುದನ್ನು ಗಮನದಲ್ಲಿಟ್ಟು ಯುವಕರಿಗೂ ಲಸಿಕೆ ನೀಡಲು ಒಲವು ತೋರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಸಂಬಂಧ ಮಾರ್ಚ್ ೫ರಿಂದ ಒಂದು ತಿಂಗಳ ಕಾಲ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ಒಟ್ಟು ೬೭,೨೯೮ ಜನರಲ್ಲಿ ಶೇಕಡವಾರು ೪೭ರಷ್ಟು ಅಂದರೆ ೩೮,೨೫೬ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಇದರಲ್ಲಿ ಬಹುತೇಕರು ಯುವ ವಯಸ್ಸಿನವರೇ ಆಗಿರುವ ಕಾರಣ ಲಸಿಕೆ ಹಂಚಿಕೆಗೆ ಸರ್ಕಾರ ಮುಂದಾಗಿದೆ.
ವೈರಸ್ ಹರಡುವುದನ್ನು ತಡೆಯುವ ಕ್ರಮಗಳ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಇತ್ತೀಚಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಈ ಅಂಕಿಅಂಶಗಳನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿತು. ಸಭೆಯಲ್ಲಿ, ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಕಳೆದ ಒಂದು ತಿಂಗಳಲ್ಲಿ ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ವಯಸ್ಸಿನ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳ ಪ್ರಕಾರ, ೦-೧೪ ವರ್ಷದೊಳಗಿನ ೪,೧೭೨ ಮಕ್ಕಳು ಈ ವರ್ಷ ಮಾರ್ಚ್ ೫ ಮತ್ತು ಏಪ್ರಿಲ್ ೫ ರ ನಡುವೆ ಪಾಸಿಟಿವ್ ಗೆ ಗುರಿಯಾಗಿದ್ದಾರೆ. ಇನ್ನು, ೧೫ ರಿಂದ ೨೯ ವರ್ಷದೊಳಗಿನ ೧೯,೩೭೮ ಮಂದಿಯಲ್ಲಿ ಅತಿ ಹೆಚ್ಚು ಸೋಂಕು ಕಂಡುಮ ಕಂಡುಬಂದಿದೆ
೩೦-೪೪ ವರ್ಷದೊಳಗಿನ ೧೮,೮೫೩ ಮಂದಿಗೂ ಪಾಸಿಟಿವ್ ದೃಢಪಟ್ಟಿದೆ. ೪೫ ರಿಂದ ೫೯ ವರ್ಷದೊಳಗಿನವರಲ್ಲಿ ೧೪,೯೭೮ ಪ್ರಕರಣಗಳು ಮತ್ತು ೬೦ ವರ್ಷಕ್ಕಿಂತ ಮೇಲ್ಪಟ್ಟ ೯,೯೧೭ ಜನರು ಪಾಸಿಟಿವ್ ಇದೆ.
ಇನ್ನು, ಒಟ್ಟು ೬೭,೨೯೮ ರೋಗಿಗಳಲ್ಲಿ, ೩೦೭ ಮಂದಿ ಸಾವನ್ನಪ್ಪಿದರು, ಅದರಲ್ಲಿ ೨೧೪ ೬೦ ವರ್ಷ ಮತ್ತು ಮೇಲ್ಪಟ್ಟವರು.
೪೫-೫೯ ವರ್ಷ ವಯಸ್ಸಿನ ೭೫ ಜನರು ಕೋವಿಡ್ -೧೯ ಗೆ ಬಲಿಯಾದರೆ, ಈ ಸಂಖ್ಯೆ ೧೫-೩೦ ವರ್ಷ ವಯಸ್ಸಿನವರಿಗೆ ನಾಲ್ಕು ಮತ್ತು ೩೦-೪೫ ವರ್ಷ ವಯಸ್ಸಿನವರಿಗೆ ೧೩ ಆಗಿತ್ತು. ಇದು ನಾವು ಪ್ರಾಯೋಗಿಕವಾಗಿ ನೋಡುತ್ತಿದ್ದೇವೆ ಎಂದು ಬಿಬಿಎಂಪಿಯ ಕೋವಿಡ್ ತಜ್ಞರ ಸಮಿತಿಯ ಸದಸ್ಯ ಡಾ.ರವೀಂದ್ರ ಮೆಹ್ತಾ ಹೇಳಿದರು.
ಪ್ರಸ್ತುತ ಲಭ್ಯವಿರುವ ಎರಡು ಲಸಿಕೆಗಳನ್ನು ೧೮ ವರ್ಷಕ್ಕಿಂತ ಮೇಲ್ಪಟ್ಟ ಯಾರಿಗಾದರೂ ನೀಡಬಹುದು ಮತ್ತು ಸರ್ಕಾರವು ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಡ್ರೈವ್ ಅನ್ನು ವಿಸ್ತರಿಸಬೇಕು. ಆದರೆ ಡೋಸೇಜ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮತ್ತೋರ್ವ ಆರೋಗ್ಯ ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನೂ, ಯುವಕರಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಪರಿಗಣಿಸಿ, ರಾಜ್ಯವು ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ಡ್ರೈವ್ ಅನ್ನು ವಿಸ್ತರಿಸಬೇಕೆಂದು ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಕೆ.ವಿ.ತ್ರಿಲೋಕ್ ಚಂದ್ರ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.