ಯುವಕರಿಂದ ಸೋಂಕಿತರಿಗೆ ಹೋಳಿಗೆ ಊಟ

ಹಗರಿಬೊಮ್ಮನಹಳ್ಳಿ :ಮೇ.31. ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್‍ನ ಸೋಂಕಿತರಿಗೆ ಪ್ರಹಾರ ಟೀಂ ಮತ್ತು ಫ್ರೆಂಡ್ಸ್ ಫೌಂಡೇಷನ್ ವತಿಯಿಂದ ಹೋಳಿಗೆ ಊಟ ನೀಡಿದರು. ಬಳಿಕ ಪ್ರಸಾದ್ ಪತ್ರಿಕೆಯೊಂದಿಗೆ ಮಾತನಾಡಿ ಕೋವಿಡ್ 2ನೇ ಅಲೆ ಅಬ್ಬರ ಹೆಚ್ಚಾಗಿದ್ದು ಎಲ್ಲರೂ ಜಾಗೃತರಾಗಿರಬೇಕು. ಈಗಾಗಲೇ ಗ್ರಾಮಾಂತರ ಪ್ರದೇಶಗಳಿಗೂ ವೈರಸ್ ಹರಡಿರುವುದರಿಂದ ಆಯಾ ಗ್ರಾಮಗಳಲ್ಲಿ ಯುವಕರೇ ಸೈನಿಕರಂತೆ ಜನರಲ್ಲಿ ಕೊರೋನಾ ಜಾಗೃತಿ ಮೂಡಿಸುತ್ತಾ ಹೋರಾಡಬೇಕಿದೆ. ಸಾರ್ವಜನಿಕರ ಸುಖಾಸುಮ್ಮನೇ ಹೊರಗಡೆ ಹೋರಾಡದೆ ಅದರಲ್ಲೂ ಯುವಕರು ಕಡ್ಡಾಯವಾಗಿ ಮಾಸ್ಕ್‍ನ್ನು ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಜೀವನ ನಡೆಸಬೇಕಿದೆ ಎಂದರು.
ಕೋವಿಡ್ ಸೆಂಟರ್‍ನ ಸೋಂಕಿತರು ಹಾಗೂ ವೈದ್ಯ ಸಿಬ್ಬಂದಿಗಳಿಗೆ ಸೇರಿ ಒಟ್ಟು 100 ಜನರಿಗೆ ಪ್ರಹಾರ ಟೀಂ ಮತ್ತು ಫ್ರೆಂಡ್ಸ್ ಫೌಂಡೇಷನ್ ವತಿಯಿಂದ ಹೋಳಿಗೆ ಊಟವನ್ನು ನೀಡಲಾಯಿತು.
ಪ್ರಹಾರ ಟೀಂ ಮತ್ತು ಪ್ರೇಂಡ್ಸ್ ಪೌಂಡೇಷನ್ ಯುವಕರು ಈಗಾಗಲೇ ಹಲವಾರು ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಈ ದಿನ ಕೋವಿಡ್ ಕೇರ್ ಸೆಂಟರ್‍ನ ಸೋಂಕಿತರಿಗೆ ಹೋಳಿಗೆ ಊಟವನ್ನು ಹಾಕಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮೆಹಬೂಬ್, ತೀರ್ಥರಾಜ್, ವಿನಾಯಕ, ಕಿರಣ್, ಅಂಬಾಡಿ ಕುಮಾರ್, ಸಂದೇಶ್, ಆಸೀಫ್, ಪ್ರಶಾಂತ, ಆಕಾಶ್, ಭರತ್, ಶರತ್, ಸಂತೋಷ್, ಶಂಕರ್, ಸಲೀಂ, ಗಿರೀಶ್, ಅಭಿಷೇಕ್, ನವೀನ್, ಸುರೇಶ್, ತಿಪ್ಪೇಶ್, ಮಂಜುನಾಥ, ಕೊಟ್ರೇಶ್, ಜಂದಿಸಾಬ್, ತಾಲೂಕು ವೈದ್ಯಾಧಿಕಾರಿ ಶಿವರಾಜ್, ವೈದ್ಯರಾದ ಮೋಹನ್, ಅರುಣ್, ಆರೋಗ್ಯ ಸಿಬ್ಬಂದಿಗಳಾದ ಶಿವರಾಜ್, ಕೀರ್ತಿ,  ಮತ್ತಿತರರು ಇದ್ದರು.