(ಸಂಜೆವಾಣಿ ವಾರ್ತೆ)
ಔರಾದ :ಸೆ.26: ಸತತವಾಗಿ ಏಳು ದಿನಗಳಿಂದ ಭರ್ಜರಿಯಾಗಿ ಗ್ರಾಮದಲ್ಲಿ ಅಲಂಕಾರಗೊಂಡ ಗಣೇಶನ ವಿಸರ್ಜನೆ ಕಾರ್ಯಕ್ರಮವು ತಾಲೂಕಿನ ನಾಗೂರ ಎಂ ಗ್ರಾಮದಲ್ಲಿ ಯುವಕರಿಂದ ಸೋಮವಾರ ಭರ್ಜರಿಯಾಗಿ ಜರುಗಿತು.
ಏಳು ದಿನಗಳ ಕಾಲ ಮುಂಜಾನೆ ಮತ್ತು ಸಾಯಂಕಾಲ ವಿಘ್ನ ನಾಯಕನ ಪೂಜೆ ಪುನಸ್ಕಾರಗಳು ಜರುಗಿದವು, ದಿನಾಲು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಇದೆ ವೇಳೆ ಸತತವಾಗಿ ಏಳು ದಿನಗಳ ಕಾಲ ವಿಘ್ನೇಶನ ಕೈಯಲ್ಲಿನ ಪೂಜೆ ಪುನಸ್ಕಾರ ಜರುಗಿರುವ ಎರಡು ವರೆ ಕೆಜಿ ಲಡ್ಡು ಉಂಡೆ ಹರಾಜಿನಲ್ಲಿ 12551ಸಾವಿರ (ಹನ್ನೆರಡು ಸಾವಿರ ಐದು ನೂರು ಐವತ್ತೊಂದು) ರುಗಳಿಗೆ ಜ್ಞಾನೋಬಾರಾವ್ ಬಿರಾದಾರ್ ಅವರು ಕೊಂಡು ಕೊಂಡರು. ಹಾಗೂ ಇನ್ನಿತರ ಹಾರ ಪೂಜಾ ಸಾಮಗ್ರಿಗಳ ಹರಾಜು ನಡೆಯಿತು.
ಸೋಮವಾರ ಸಾಯಂಕಾಲ ಗ್ರಾಮದಲ್ಲಿ ಗಣೇಶ ವಿಸರ್ಜನೆ ನಿಮಿತ್ಯ ಪ್ರಸಾದ ವ್ಯವಸ್ಥೆ ನಡೆಯಿತು. ತದನಂತರ ಟ್ರ್ಯಾಕ್ಟರ್ ತೆರೆದ ವಾಹನದಲ್ಲಿ ವಿಘ್ನೇಶನ ಭವ್ಯವಾದ ಮೆರವಣಿಗೆ ನಡೆಯಿತು. ನಂತರ ಗ್ರಾಮದ ಸಮೀಪದಲ್ಲಿರುವ ತೆರೆದ ಬಾವಿಯಲ್ಲಿ ಗಣೇಶನ ವಿಸರ್ಜನೆ ಜರುಗಿತು.
ಈ ಸಂದರ್ಭದಲ್ಲಿ ಭೀಮರಾವ್ ಪೆÇಲೀಸ ಪಾಟೀಲ, ಸುನಿಲ್ ಬಿರಾದರ್, ಗುರುನಾಥ್ ಸೇರಿಕಾರ್, ಗುಂಡಪ್ಪ ಕೋರೆ,ಮಲ್ಲಿಕಾರ್ಜುನ, ಅವಿನಾಶ್, ಸಂಗಪ್ಪ ಸೇರಿಕಾರ್, ರಾಜಪ್ಪ ಸೊರಳೆ, ಹಣಮಂತ ಮೇತ್ರೆ, ಆನಂದ ಸೇರಿಕಾರ್, ಭರತ್ ಮಾನೋರೆ, ಕಪಿಲ್, ಸಂತೋಷ್ ಮಾನೋರೆ, ಕುಶಪ್ಪ, ಜ್ಞಾನೊನಬಾ ಬಿರಾದರ್, ಅನಿಲ್ ಗೌಡ, ಬಾಲಾಜಿ ಮೇತರೆ, ಬಕ್ಕಪ್ಪ ಸೇರಿಕಾರ್, ಇಸ್ಮಾಯಿಲ್, ಅಶೋಕ ಗೌಡ, ಮಹಾದೇವ, ಬಸ್ವಾರಾಜ್, ಶ್ರೀಕಾಂತ್ದೇ ಬಿರಾದಾರ್ವಿ,ದಾಸ್,ಸೋನು ಮಾನುರೇ, ರಾಜು ಪಾಟೀಲ್, ಇತರರಿದ್ದರು.