ಯುವಕರಲ್ಲಿ ದೇಶ ಭಕ್ತಿ ಬರಲು ವಿವೇಕಾನಂದರ ಸಂದೇಶ ಅನುಸರಿಸಿ

ಹುಮನಾಬಾದ್: ಜ.13: ಯುವಕರಲ್ಲಿ ದೇಶಭಕ್ತಿ ಆತ್ಮಬಲ ಸಾಹಸ ಮೂಡಿಬರಲು ಸ್ವಾಮಿ ವಿವೇಕಾನಂದರ ಯುವ ಸಂದೇಶ ಅನುಸರಿಸಬೇಕೆಂದು ಬೀದರ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಕಾಶ್ ಪಾಟೀಲ್ ತಾಲೂಕಿನ ಘಾಟಬೋರಳ ಪ್ರಕಾಶ್ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಜಮಾತ ಜಿಜಾಬಾಯಿ ಅವರ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನುಡಿದರು. ಯುವಕರಲ್ಲಿ ದೇಶಭಕ್ತಿ ನಾಯಕತ್ವಗುಣ ಮೈಗೂಡಿಸಿಕೊಂಡಾಗ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು. ಮಹಾರಾಷ್ಟ್ರದ ಶಾಜಾನಿ ಔರಾದ ವಸಂತರಾವ ಪಾಟೀಲ್ ಕಾಲೇಜಿನ ಪ್ರಾಚಾರ್ಯ ಡಾ. ಶಾರಾದ ಜಾಧವ ಮಾನೆ ಮುಖ್ಯ ಅತಿಥಿಗಳಾಗಿ ಮಾತನಾಡಿ ರಾಜ್ ಮಾತ ಜಿಜಾಬಾಯಿ ಪರಕಿಯರ ಆಳ್ವಿಕೆಯಿಂದ ಆಗುತ್ತಿರುವ ಅನ್ಯಾಯ ಅತ್ಯಾಚಾರಗಳನ್ನು ಹೋಗಲಾಡಿಸಲು ಸಾರ್ವಜನಿಕರಲ್ಲಿ ದೇಶಭಕ್ತಿ ವಡಮೂಡುಸುತ್ತಿದ್ದರು. ಶಿವಾಜಿ ಮಹಾರಾಜರಂತ ಶೂರ ದೇಶಭಕ್ತನನ್ನು ಸಮಾಜಕ್ಕೆ ನೀಡಿದ ಕೊಡುಗೆ ದೇಶ ಮರೆಯಲಾರದು ಎಂದರು. ಯುವಕ ಯುತಿಯರು ಪುಸ್ತಕಗಳನ್ನು ಖರೀದಿಸಿ ಹಂಚುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕರೆ ನೀಡಿದರು. ಬಾವರಾವ ಪಾಟೀಲ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕಲಾವತಿ, ರಾಣಿ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಸಂತೋಷ ತಿವಾರಿ, ಅಂಬೇಡ್ಕರ ವಸತಿ ಶಾಲೆಯ ಪ್ರಾಚಾರ್ಯ ಕಲ್ಲಪ್ಪ ತಮ್ಕೆ ಸಂಸ್ಥೆಯ ನಿರ್ದೇಶಕರುಗಳು ಪ್ರೌಢ ಶಾಲೆಯ ಮುಖ್ಯಗುರುಗಳಾದ ಪಂಡಿತರಾವ ಬಾಳುರೆ ಉಪಸ್ಥಿತರಿದ್ದರು.