ಯುವಕರಲ್ಲಿ ಓದುವ ಹವ್ಯಾಸ ಬೆಳೆಸುವುದು ಅಗತ್ಯ

ಬೀದರ್:ಅ.1: ಜನರಲ್ಲಿ ಅದರಲ್ಲಿಯೂ ವಿಶೇಷವಾಗಿ ಯುವ ವೃಂದದಲ್ಲಿ ವಾಚನಾಭಿರುಚಿ ಮತ್ತು ಓದುವ ಹವ್ಯಾಸ ಬೆಳೆಸುವಂತೆ, ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಸದಸ್ಯರು ಮತ್ತು ನಿವೃತ್ತ ಪೆÇಲೀಸ್ ನಿರ್ದೇಶಕರಾದ ರಾಘವೇಂದ್ರ ಔರಾದಕರ್ ಕರೆ ನೀಡಿವರು.
ಜಿಲ್ಲಾ ಪೆÇಲೀಸ್ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡ ಸಾಹಿತಿ ಹಾಗೂ ನಿವೃತ್ತ ಪೆÇಲೀಸ್ ಮಹಾ ನಿರ್ದೇಶಕರಾದ ಡಾ.ಡಿ.ಎ.ಗುರು ಪ್ರಸಾದ್ ಲೇಖನಿಯ ಮೂಸೆಯಲ್ಲಿ ಒಡ ಮೂಡಿದ ‘ಕೈಗೆ ಬಂದ ತುತ್ತು’ (ಆತ್ಮಕಥೆ) ಕೃತಿ (ಮೂರನೆ ಆವೃತ್ತಿ) ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು, ಮಾಸಿಕಗಳನ್ನು ಮತ್ತು ಕಾದಂಬರಿಗಳನ್ನು ಓದುವುದರಿಂದ ಜ್ಞಾನಾರ್ಜನೆ ಸಾಧ್ಯ ಎಂದು ನುಡಿದರು.
ಓದುವುದರಿಂದ ಉದತ್ತ ಜ್ಞಾನಾರ್ಜನೆ
ಬಹಳ ಆಳ ಮತ್ತು ವಿಸ್ತಾರವಾಗಿರುತ್ತದೆ ಎಂದು ಹೇಳಿದರು.
ತಂತ್ರಜ್ಞಾನ ಅನುಸರಿಸುವುದರ ಜೊತೆ ಜೊತೆಗೆ ಸಾಮಾನ್ಯ ಜ್ಞಾನವನ್ನು ಬಳಸಿದರೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗುತ್ತದೆ ಎಂಬುದಕ್ಕೆ ಅವರು ಸಾಹಿತಿ ಹಾಗೂ ನಿವೃತ್ತ ಪೆÇಲೀಸ್ ಮಹಾ ನಿರ್ದೇಶಕರಾದ ಡಾ.ಡಿ.ಪಿ ಗುರುಪ್ರಸಾದ್ ಅವರ ಸೇವಾ ಅವಧಿಯಲ್ಲಿನ ಪ್ರಸಂಗವನ್ನು ಉದಾಹರಣೆಯನ್ನಾಗಿ ನೀಡಿದರು.
ಕೈಗೆ ಬಂದ ತುತ್ತು’ (ಆತ್ಮ ಕಥೆ) ಕೃತಿಯ ಕರ್ತೃ, ಸಾಹಿತಿ ನಿವೃತ್ತ ಪೆÇಲೀಸ್ ಮಹಾ ನಿರ್ದೇಶಕ ಡಾ.ಡಿ.ಎ.ಗುರು ಪ್ರಸಾದ್ ಮಾತನಾಡಿ, 1991 ರಲ್ಲಿ ಬೀದರ್ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿರುವೆ, ನನಗೆ ಬೀದ????ಂದರೆ ಬಹಳ ಪ್ರೀತಿ ಎಂದು ತಿಳಿಸಿದರು.
ಬೀದರ್ ಜಿಲ್ಲೆ ತನ್ನದೇ ಆದ ವಿಶೇಷತೆ ಹೊಂದಿದೆ ಎಂದು ಅವರು ಪ್ರತಿಪಾದಿಸಿದರು.
ತಮ್ಮ ವೃತ್ತಿ ಜೀವನದಲ್ಲಿನ ಬಹಳಷ್ಟು ಪ್ರಸಂಗಗಳನ್ನು ಸರಿಸಿ ತಮ್ಮ ಅನುಭವದ ಬಿಚ್ಚಿಟ್ಟರು.
ಪರಿಶ್ರಮ ಮತ್ತು ಛಲ ಯಶಸ್ಸಿನ ಮೆಟ್ಟಿಲುಗಳಾಗಿವೆ ಎಂದು ಮಾರ್ಮಿಕವಾಗಿ ನುಡಿದರು.
ಸಾಹಿತಿ ಮತ್ತು ನಿವೃತ್ತ ಡಿಐಜಿಪಿ ಡಾ.ಡಿ.ಸಿ.ರಾಜಪ್ಪ ಮಾತನಾಡಿ, ಪೆÇಲೀಸ್ ಸಮವಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ. ಪೆÇಲೀಸರು ಕೂಡ ಒಂದು ಸಮಾಜದ ಭಾಗವಾಗಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಪೆÇಲೀಸ್ ಕಾಪಾಡುವುದರಲ್ಲಿ ಪೆÇಲೀಸರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನುಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪೆÇ್ರ.ಶಿವಕುಮಾರ್ ಕಟ್ಟೆ ಕೈಗೆ ಬಂದ ಹಾಗೂ ತುತ್ತು’ (ಆತ್ಮ ಕಥೆ) ಕೃತಿಯನ್ನು ಪರಿಚಯಿಸಿದರು.
ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್, ನಿವೃತ್ತ ಪೆÇಲೀಸ್ ನೌಕರರ ಸಂಘ ಬೀದರ್ ಜಿಲ್ಲಾ ಶಾಖೆ ಅಧ್ಯಕ್ಷ ಡಿ.ನಾರಾಯಣ ವೇದಿಕೆಯಲ್ಲಿದ್ದರು,
ಜಿಲ್ಲಾ ಪೆÇಲೀಸ್ ನೌಕರರ ಸಂಘ ಹಾಗೂ ಜಿಲ್ಲಾ ನಿವೃತ್ತ ಪೆÇೀಲಿಸ್ ನೌಕರರ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿತ್ತು.
ಇದಕ್ಕೂ ಮುನ್ನ ಜಿಲ್ಲಾ ಪೆÇಲೀಸ್ ಕಚೇರಿ ಆವರಣದಲ್ಲಿ ಆಯೋಜಿಸಿದ ‘ವರ್ಲಿ ಪೇಟಿಂಗ್’ ಪ್ರದರ್ಶನವನ್ನು ಮತ್ತು ಆರಂಭಿಸಿರುವ ‘ಸತ್ಯ ದರ್ಪಣ’ ಕ್ಯೂ ಆರ್ ಕೋಡ್’ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.
ಜಿಲ್ಲಾ ಪೆÇೀಲಿಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ ಎಲ್ ಸರ್ವರನ್ನು ಸ್ವಾಗತಿಸಿದರು.
ಬೀದರ್ ತಾಲ್ಲೂಕಿನ ಬಗಲ್ ಗ್ರಾಮದ ಬಳಿಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚನ್ನಬಸವ ಹೆಡೆ ಕಾರ್ಯಕ್ರಮ ನಿರ್ವಹಿಸಿದರು. ವರಿಷ್ಠಾಧಿಕಾರಿಗಳ ಪೆÇಲೀಸ್ ಪೆÇಲೀಸ್ ಆವರಣದಲ್ಲಿರುವ ಕಚೇರಿ ಗ್ರಂಥಾಲಯದ ಗ್ರಂಥಪಾಲಕರು ಮತ್ತು ಸಹಾಯಕ ಪೆÇಲೀಸ್ ಸಬ್-ಇನ್ಸ್ಪೆಕ್ಟರ್ ಹಂಸ ಕವಿ ವಂದಿಸಿದರು.
ಸಮಾಜ ಸೇವಕರಾದ ಗುರಮ್ಮ ಸಿದ್ದಾರೆಡ್ಡಿ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್, ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಅವಧೂತ ಸೇವಾ ಟ್ರಸ್ಟ್ ಅಧ್ಯಕ್ಷ ಮತ್ತು ಉದ್ಯಮಿ ಗುರುಸಿದ್ದಪ್ಪ ಬಿರಾದಾರ್ . ಹಿರಿಯ ನ್ಯಾಯವಾದಿ ಜಯಶಂಕ ಎಸ್.ಶೇಷಾದಿ ಅವರನ್ನೊಳಗೊಂಡಂತೆ ಬೀದರ್ ಜಿಲ್ಲೆಯಲ್ಲಿನ ಇನ್ನೂ ಅನೇಕ ಗಣ್ಯರು, ಹಿರಿಯ-ಕಿರಿಯ ಸಾಹಿತಿಗಳು ಮತ್ತು ಪೆÇಲೀಸರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.