ಯುವಕರನ್ನು ಫ್ರಂಟ್ ಲೈನ್ ವರ್ಕರ್ ಎಂದು ಘೋಷಿಸಿ

ರಾಯಚೂರು, ಮೇ.೨೯-ಜಿಲ್ಲೆಯಾದ್ಯಂತ ಸಾವಿರಾರು ಯುವಕರು ಕೊರೋನಾ ರೋಗಿಗಳಿಗೆ ನಿರಂತರ ಸೇವೆ ಮಾಡಿ ಕರೋನಾ ಮಹಾಮಾರಿ ವಿರುದ್ದ ಹೋರಾಡಲು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಫ್ರಂಟ್ ಲೈನ್ ವರ್ಕರ್ ಎಂದು ಘೋಷಿಸಿ ಕೋವಿಡ್ ವ್ಯಾಕ್ಸಿನ್ ಗೆ ಮೊದಲು ಅವಕಾಶ ಕಲ್ಪಿಸಬೇಕೆಂದು ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ಅರುಣ ದೋತರ ಬಂಡಿ
ಒತ್ತಾಯಿಸಿದರು.
ಜಿಲ್ಲೆಯಾದ್ಯಂತ ಎಲ್ಲಾ ರಾಜಕೀಯ ಪಕ್ಷದ ಯುವ ಘಟಕಗಳ ಕಾರ್ಯಕರ್ತರು, ಸಂಘ – ಸಂಸ್ಥೆಗಳು, ಎನ್ ಜಿ ಒ ಗಳು, ಸೇರಿದಂತೆ ಅಭಿಮಾನಿ ಬಳಗದ ಯುವಕರು ಸ್ವಯಂ ಪ್ರೇರಣೆಯಿಂದ ಕೋವಿಡ್ ರೋಗಿಗಳಿಗೆ , ಅಟೆಂಡರ್ ಗಳಿಗೆ, ನಿರಂತರ ಸೇವೆ ಮಾಡುತ್ತಿರುವ ಪೋಲಿಸ್ ಸಿಬ್ಬಂದಿಗಳಿಗೆ ಹಾಗೂ ನಿರ್ಗತಿಕರಿಗೆ ನಿರಂತರ ಊಟ, ಉಪಚಾರ, ಮಾಸ್ಕ್ ಹಂಚುವ ಮೂಲಕ ಕೊರೋನಾ ಮಹಾ ಮಾರಿಯ ವಿರುದ್ದ ಹೋರಾಟ ಮಾಡುತ್ತಿದ್ದಾರೆ.
ನಿರಂತರ ಸೇವೆಯಲ್ಲಿರುವ ಮುಂಚೂಣಿಯ ಯುವಕರಿಗೆ ಫ್ರಂಟ್ ಲೈನ್ ವರ್ಕರ್ ಎಂದು ಘೋಷಿಸಿ ಅವರ ಕೌಟುಂಬಿಕ ಭದ್ರತೆಗಾಗಿ ಮೊದಲು ವ್ಯಾಕ್ಸಿನ್ ನೀಡಿ ನಿರಂತರ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದರು.