ಯುವಕನ ಮೇಲೆ ಹಲ್ಲೆ ನಡೆಸಿ ಹಣ ಸುಲಿಗೆ

ಕಲಬುರಗಿ,ಜೂ.20-ಕಲಬುರಗಿಯಿಂದ ಬೈಕ್ ಮೇಲೆ ಕಾಳಗಿಗೆ ಹೋಗುತ್ತಿದ್ದ ಯುವಕನೊಬ್ಬನ ಮೇಲೆ 7-8 ಜನ ಹಲ್ಲೆ ನಡೆಸಿ ನಗ-ನಾಣ್ಯ ದೋಚಿದ ಘಟನೆ ಸಣ್ಣೂರ ಕ್ರಾಸ್ ಹತ್ತಿರ ನಡೆದಿದೆ.
ನಗರದ ಸಂತೋಷ ಕಾಲೋನಿಯ ವಿರೇಶ ಹಳ್ಳಿಖೇಡ (26) ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ನಗ-ನಾಣ್ಯ ದೋಚಲಾಗಿದೆ.
ವಿರೇಶ ಕಲಬುರಗಿಯಿಂದ ಬೈಕ್ ಮೇಲೆ ಕಾಳಗಿಗೆ ಹೋಗುತ್ತಿದ್ದಾಗ ಸಣ್ಣೂರ ಕ್ರಾಸ್ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿ ಬೈಕ್ ಡಿಕ್ಕಿ ಹೊಡೆಸಿದ್ದಾನೆ. ನಂತರ ಜಗಳ ತೆಗೆದು ತನ್ನ 7-8 ಜನ ಸಂಗಡಿಗರನ್ನು ಸ್ಥಳಕ್ಕೆ ಕರೆಯಿಸಿ ಹಲ್ಲೆ ನಡೆಸಿ 22 ಸಾವಿರ ರೂ.ನಗದು, 5 ಗ್ರಾಂ.ಉಂಗುರ ಮತ್ತು ಮೊಬೈಲ್‍ನಲ್ಲಿದ್ದ 8 ಸಾವಿರ ರೂ.ಡ್ರಾ ಮಾಡಿಕೊಂಡಿದ್ದಾರೆ.
ಈ ಸಂಬಂಧ ವಿರೇಶ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.