ಯುವಕನ ಕೊಲೆ

ಕಾಳಗಿ : ನ.17:ತಾಲೂಕಿನ ಅರಣಕಲ್ ಕಿಂಡಿ ತಾಂಡಾದಲ್ಲಿ ಮನೆ ಜಾಗದ ವಿಚಾರದ ಜಗಳವಾಗಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಅರಣಕಲ್ ಕಿಂಡಿ ತಾಂಡಾದಲ್ಲಿ ನಡೆದಿದೆ.

ಆನಂದ ಜೀವಲಾ ಚವ್ಹಾಣ (23) ಕೊಲೆಯಾದ ಯುವಕ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕಾಳಗಿ ಠಾಣೆಯಲ್ಲಿ 13 ಜನ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಶಹಾಬಾದ್ ಡಿವೈಎಸ್ಪಿ ಉಮೇಶ ಚಿಕ್ಕಮಠ, ಕಾಳಗಿ ಸಿಪಿಐ ವಿನಾಯಕ, ಪಿಎಸಐ ಹುಲೆಪ್ಪ ಗೌಡಗೊಂಡ, ಕ್ರೈಂ ಪಿಎಸ ಐ ಅಮೋಜ್ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.