ಯುವಕನ ಕೊಲೆ: ಆರೋಪಿಗಳ ಸೆರೆ

ಚಿಂಚೋಳಿ,ಮೇ.16-ಕಾಳಗಿ ತಾಲ್ಲೂಕಿನ ಮೋಘಾ ಗ್ರಾಮದಲ್ಲಿ ನಡೆದ ಜಗನ್ನಾಥ ತಂದೆ ಭೀಮರಾಯ ಚಿಂತಕುಂಟಾ (22) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾಣಿಕ ತಂದೆ ತುಕಾರಾಮ ಮಾಳಗಿ (25) ಮತ್ತು ಅಪ್ರಾಪ್ತ ಬಾಲಕ (ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ)ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೇ.13 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಗನ್ನಾಥನನ್ನು ಆರೋಪಿ ಮಾಣಿಕ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಜ್ಯೂಸ್ ಕುಡಿದು ಬರೋಣ ಬಾರೋ ಎಂದು ಮೋಘಾ ಸೀಮಾಂತರದ ಹೊಲದ ಪಕ್ಕದ ನಾಲಾದಲ್ಲಿ ಕರೆದುಕೊಂಡು ಹೋಗಿ ಅಪ್ರಾಪ್ತ ಬಾಲಕನ ಸಹಾಯದೊಂದಿಗೆ ಹಗ್ಗದಿಂದ ಕುತ್ತಿಗೆ ಬಿಗಿದು ಎದೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಬಗ್ಗೆ ಮೃತನ ತಂದೆ ಭೀಮರಾಯ ಚಿಂತಕುಂಟಾ ರಟಕಲ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಎಸ್ಪಿ, ಹೆಚ್ಚುವರಿ ಎಸ್ಪಿ ಹಾಗೂ ಚಿಂಚೋಳಿ ಡಿ.ಎಸ್.ಪಿ ಅವರ ಮಾರ್ಗದರ್ಶನದಲ್ಲಿ ಸುಲೇಪೇಟ ಸಿಪಿಐ ಜಗದೀಶ ಕೆ.ಜೆ, ರಟಕಲ್ ಪಿಎಸ್ಐ ಶಿವಶಂಕರ ಕೆ.ಸುಬೇದಾರ, ಸಿಬ್ಬಂದಿಗಳಾದ ರೇವಣಸಿದ್ದಪ್ಪಾ, ನಟರಾಜ, ದುಧಇರಾಮ, ಬಸಲಿಂಗಪ್ಪ, ವಿಶ್ವನಾಥ, ಸಂತೋಷಕುಮಾರ, ಶ್ರೀನಾಥ ಮತ್ತು ಶಂಕರ ಅವರು ತನಿಖೆ ನಡೆಸಿ 24 ಗಂಟೆಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡದ ಕಾರ್ಯವನ್ನು ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.