ಯುವಕನ ಕೊಲೆ:ಮೂವರ ಸೆರೆ

ಕಲಬುರಗಿ,ಡಿ.25-ನಗರದ ಶಹಾಬಾದ ರಸ್ತೆಯ ಗ್ರೀನ್ ಸಿಟಿ ಬಳಿ ಈಚೆಗೆ ನಡೆದ ಬಾಪು ನಗರದ ಕಾರ್ತಿಕ (18) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಸೇರಿದಂತೆ ಮೂವರು ಆರೋಪಿಗಳನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ನಿನ್ನೆ ಬೆಳಿಗ್ಗೆ ಬಂಧಿಸಿದ್ದಾರೆ.
ಬಾಪುನಗರದ ರೋಹಿತ್ ಅಲಿಯಾಸ್ ರಫಿಕ್ ತಂದೆ ರೆಹಮಾನ್ (20), ಡಬರಾಬಾದ್ ಕ್ರಾಸ್‍ನ ಕನ್ಯಾ ತಂದೆ ಕಿಶನ್ (20) ಮತ್ತು ಇನ್ನೊಬ್ಬ ಆರೋಪಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನಾಗಿದ್ದಾನೆ.
ಡಿ.21 ರಂದು ರಾತ್ರಿ ಗೆಳೆಯರೊಂದಿಗೆ ಹೊರಗಡೆ ಹೋಗಿದ್ದ ಕಾರ್ತಿಕನನ್ನು ನಗರದ ಗ್ರೀನ್ ಸಿಟಿ ಬಳಿ ಮಾರಕಾಸ್ತ್ರ ಹೊಡೆದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಅವರ ತಾಯಿ ರತ್ತಿಯಾಬಾಯಿ ಅವರು ರೋಹಿತ್, ಕನ್ಯಾ ಸೇರಿ ಮೂವರ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ತನಿಖೆ ನಡೆಸಿದ ವಿಶ್ವವಿದ್ಯಾಲಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.