ಯುವಕನ ಅಂತ್ಯಸಂಸ್ಕಾರ ಮಾಡಿದ ಎಂಪಿಆರ್

ರ್ಹೊನ್ನಾಳಿ.ಜೂ.೧ : ಕೊರೊನಾದಿಂದ ಮೃತ ಪಟ್ಟ ಯುವಕನ ಮೃತ ದೇಹವನ್ನು ಗ್ರಾಮಕ್ಕೆ ತರಲು ಗ್ರಾಮಸ್ಥರು ಒಪ್ಪದ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ‍್ಯ ಖುದ್ದು ಅಂಬ್ಯಲೆನ್ಸ್ ಚಾಲನೆ ಮಾಡಿಕೊಂಡು ಹೋಗಿ ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಿದ ಮನಕಲಕುವ ಘಟನೆ ಹೊನ್ನಾಳಿಯಲ್ಲಿ ನಡೆದಿದೆ.ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗೀ ಕೆಲಸ ಮಾಡುತ್ತಿದ್ದ ಯುವಕ ಲಾಕ್‌ಡೌನ್ ಹಿನ್ನೆಲೆಯಲ್ಲಿ  ಬಂದಿದ್ದ. ಆದರೇ ಯುವಕನಿಗೆ ಕೊರೊನಾ ಸೋಂಕು ತಗುಲಿದ್ದು ಹೊನ್ನಾಳಿಯ ತಾಲೂಕು ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದ,  ಕೋವಿಡ್ ವಾರ್ಡ್ ಗೆ ಭೇಟಿ ನೀಡಿದ್ದ ಶಾಸಕರು ಯುವಕನಿಗೆ ಧೈರ್ಯ ಹೇಳಿ ಬಂದಿದ್ದರು.ಆದರೇ ವಿಧಿಯಾಟವೇ ಬೇರೆಯಾಗಿತ್ತು,  ಕೆಲವೇ ಘಂಟೆಗಳಲ್ಲಿ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.ಯುವಕನ ಮೃತ ದೇಹ ಗ್ರಾಮಕ್ಕೆ ತರದಂತೆ ಗ್ರಾಮಸ್ಥರ ಮನವಿ : ಕೋವಿಡ್ ನಿಂದ ಮೃತಪಟ್ಟ ಯುವಕನ ಮೃತ ದೇಹವನ್ನು ಗ್ರಾಮಕ್ಕೆ ತರದಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದ್ದಾರೆ. ಜಗಳೂರು ತಾಲೂಕಿನ ಮೂಲದವರಾದ ಯುವಕನ ಪೋಷಕರು ಹೊನ್ನಾಳಿಯಲ್ಲಿ ನೆಲೆಸಿದ್ದು, ಯುವಕನ ಮೃತ ದೇಹವನ್ನು ಜಗಳೂರು ತಾಲೂಕಿನ ಹುಟ್ಟೂರಿಗೆ ತೆಗೆದುಕೊಂಡು ಹೋಗಲು ಪೋಷಕರು ಮುಂದಾದಾಗ ಗ್ರಾಮಸ್ಥರು ಮೃತ ದೇಹ ಗ್ರಾಮಕ್ಕೆ ತರದಂತೆ ಮನವಿ ಮಾಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಶಾಸಕರೇ ಸತಃ ಮೃತ ದೇಹವನ್ನು ಅಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಿ ಹೊನ್ನಾಳಿಯ ಹಿಂದು ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿಸಿದ್ದಾರೆ.