
ಬ್ರೂಸೆಲ್ಸ್, ಮೇ.೧೭- ರಷ್ಯಾದ ತೈಲವನ್ನು ಮರುಮಾರಾಟ ಮಾಡುತ್ತಿರುವ ಭಾರತಕ್ಕೆ ಯೂರೋಪಿಯನ್ ಒಕ್ಕೂಟ ಕಡಿವಾಣ ಹಾಕಬೇಕು ಎನ್ನುವ ಯುರೋಪಿಯನ್ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಪ್ ಬೊರೆಲ್ ಹೇಳಿಕೆ ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್. ಜೈ ಶಂಕರ್ ತಿರುಗೇಟು ನೀಡಿದ್ದಾರೆ.
ಯುರೋಪಿಯನ್ ಒಕ್ಕೂಟದ ನಿಯಮಾವಳಿಗಳನ್ನು ನೋಡಿ, ರಷ್ಯಾದ ಕಚ್ಚಾ ತೈಲ ಮೂರನೇ ದೇಶದಲ್ಲಿ ಗಣನೀಯವಾಗಿ ರೂಪಾಂತರಗೊಂಡಿದೆ ಮತ್ತು ಇನ್ನು ಮುಂದೆ ರಷ್ಯಾದ ತೈಲ ಪರಿಗಣಿಸಲಾಗುವುದಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಇಂಧನ ವಲಯದ ಮೇಲೆ ನಿರ್ಬಂಧ ಬಿಗಿಗೊಳಿಸಲು ಮುಂದಾದಾಗ, ಯುರೋಪ್‌ಗೆ ಡೀಸೆಲ್ ಸೇರಿದಂತೆ ಸಂಸ್ಕರಿಸಿದ ಇಂಧನವಾಗಿ ರಷ್ಯಾದ ತೈಲವನ್ನು ಮರುಮಾರಾಟ ಮಾಡುತ್ತಿರುವ ಭಾರತವನ್ನು ಯುರೋಪಿಯನ್ ಒಕ್ಕೂಟ ಭೇದಿಸಬೇಕು ಎನ್ನುವ ಹೇಳಿಕೆಯಲ್ಲಿ ಹುರುಳಿಲ್ಲ ಎಂದಿದ್ದಾರೆ…
“ಭಾರತ ರಷ್ಯಾದ ತೈಲ ಖರೀದಿಸುತ್ತಿದ್ದು ಸಾಮಾನ್ಯವಾಗಿದೆ.” ಎಂದು ಯುರೋಪಿಯನ್ ವಿದೇಶಾಂಗ ನೀತಿ ಮುಖ್ಯಸ್ಥ ಬೊರೆಲ್ ಹೇಳಿಕೆಗೆ ತಿರುಗೇಟು ನೀಡಿರುವ ಜೈಶಂಕರ್ ಅವರು ಭಾರತ-ನಿರ್ಮಿತ ರಷ್ಯಾದ ಕಚ್ಚಾ ತೈಲದಿಂದ ಬರುವ ಸಂಸ್ಕರಿಸಿದ ಉತ್ಪನ್ನಗಳ ಮೇಲೆ ಭಾರತ ಕಾರ್ಯನಿರ್ವಹಿಸಲು ಬಯಸುತ್ತದೆ ಎಂದಿದ್ದಾರೆ.
ಯುರೋಪಿಯನ್ ಕಾರ್ಯಕಾರಿ ಉಪಾಧ್ಯಕ್ಷ ಮಾರ್ಗರೆಥ್ ವೆಸ್ಟೇಜರ್ “ನಿರ್ಬಂಧಗಳ ಕಾನೂನು ಆಧಾರದ ಬಗ್ಗೆ ಯಾವುದೇ ಸಂದೇಹವಿಲ್ಲ” ಎಂದು ಹೇಳಿದ್ದಾರೆ.
ಜೈಶಂಕರ್ ಅವರೊಂದಿಗೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಜೈಶಂಕರ್ ಅವರು ಬಾಂಗ್ಲಾದೇಶ, ಸ್ವೀಡನ್ ಮತ್ತು ಬೆಲ್ಜಿಯಂ ಅನ್ನು ಒಳಗೊಂಡ ಮೂರು ರಾಷ್ಟ್ರಗಳ ಭೇಟಿಯ ಕೊನೆಯ ಹಂತಕ್ಕಾಗಿ ಬ್ರಸೆಲ್ಸ್‌ಗೆ ಆಗಮಿಸಿದ್ದಾರೆ.
ಈ ಹಿಂದೆಯೂ ಸಚಿವ ಜೈಶಂಕರ್ ಅವರು ರಷ್ಯಾದಿಂದ ಭಾರತದ ಆಮದುಗಳನ್ನು ಸಮರ್ಥಿಸಿಕೊಂಡಿದ್ದರು, ಉಕ್ರೇನ್‌ನಲ್ಲಿನ ಮಿಲಿಟರಿ ಕ್ರಮದ ದೃಷ್ಟಿಯಿಂದ ರಷ್ಯಾದೊಂದಿಗಿನ ವ್ಯಾಪಾರವನ್ನು ಕಡಿಮೆ ಮಾಡಲು ನವದೆಹಲಿಯ ಮೇಲೆ ಒತ್ತಡ ಹೇರಿದ್ದಕ್ಕಾಗಿ ಪರೋಕ್ಷವಾಗಿ ಟೀಕಿಸಿದ್ದಾರೆ.