ಯುಪಿಎಸ್ ಸಿ ಪರೀಕ್ಷೆ ಪಾಸಾದ. ಬನ್ನಿಕಲ್ಲಿನ ಬಿ.ವಿ. ಶ್ರೀದೇವಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.29: ಅವಿಭಜಿತ ಬಳ್ಳಾರಿ‌ ಜಿಲ್ಲೆಯ ಹಗರಿಬೊಮ್ಮಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದ ಯುವತಿ ಬಿ.ವಿ.ಶ್ರೀದೇವಿ ಅವರು ನಿನ್ನೆ ಪ್ರಕಟಗೊಂಡ ಯುಪಿಎಸ್ ಸಿ ಪರೀಕ್ಷೆಯಲ್ಲಿ 573 ನೇ ಱ್ಯಾಂಕ್ ಗಳಿಸಿದ್ದಾರೆ.
ಇವರ ತಂದೆ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ವಿಶ್ವಸ್ತ ಮಂಡಳಿಯ ಸದಸ್ಯರು, ಹಗರಿಬೊಮ್ಮನಹಳ್ಳಿ ತಾಲೂಕಾ ಘಟಕದ ಮಾಜಿ ಅಧ್ಯಕ್ಷರು ಹಾಗೂ ವಕೀಲರಾಗಿದ್ದಾರೆ.
ಎರಡನೆಯ ಪ್ರಯತ್ನದಲ್ಲಿ ಅವರು  ಈ ಸಾಧನೆ ಮಾಡಿದ್ದಾರೆ.
ಹೈದ್ರಾಬಾದ್ ಸ್ಟಡಿ ಸರ್ಕಲ್ ನಲ್ಲಿ ಕೋಚಿಂಗ್ ಪಡೆದಿದ್ದ ಇವರು ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಶನ್ಸ್ ನಲ್ಲಿ 2014 ರಲ್ಲಿ ಮೈಸೂರಿನಲ್ಲಿ  ಇಂಜಿನಿಯರಿಂಗ್  ಪದವಿ ಪಡೆದಿದ್ದರು.
ಸದ್ಯ ಶ್ರೀದೇವಿ ಅವರು  ಕೇಂದ್ರ ಸರ್ಕಾರ ಗುಜರಾತ್ ನಲ್ಲಿ ಆರಂಭಿಸಿರುವ ಇಂಡಿಯನ್ ಪೈನಾನ್ಸ್ ಸರ್ವೀಸ್ ಅಥಾರಟಿಯಲ್ಲಿ  ಸಧ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ‌