ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿದ್ಯಾರ್ಥಿಗೆ ಸನ್ಮಾನ

ಚಿತ್ರದುರ್ಗ. ಅ.೧೫;  ಕಾಲೇಜಿನಲ್ಲಿ ಓದುತ್ತಿದ್ದಾಗಲೇ ನಾನು ರೋಟರ್ಯಾಕ್ಟ್ ಜತೆ ಸಂಬಂಧ ಇಟ್ಟುಕೊಂಡು, ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡಿದ್ದು ನನ್ನ ಪರೀಕ್ಷೆ ಬರೆಯಲಿಕ್ಕೆ ಅನುಕೂಲವಾಯಿತು, ದೇಶದ ನಾನಾ ಸಮಸ್ಯೆಗಳು ನನ್ನ ಅರಿವಿಗೆ ಬಂದಿತ್ತು, ಬಡವರ ಮನೆಗೆ ಸಹಾಯ ತಲುಪಿಸಲು ನಾವು ಶ್ರೀಮಂತರ ಮನೆಯಿಂದ ಹಳೆಯ ಪತ್ರಿಕೆಗಳನ್ನು ಪಡೆದು, ಅವುಗಳನ್ನು ಮಾರಾಟ ಮಾಡಿ ಸೇವೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದೆವು ಎಂದು ಯುಪಿಎಸ್‌ಸಿಯಲ್ಲಿ 765ನೇ ರ‍್ಯಾಂಕ್ ಗಳಿಸಿದ ಹೊಸದುರ್ಗ ತಾಲ್ಲೂಕಿನ ಕು ಮಮತಾ  ಗೋವಿಂದಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಅವರು ರೋಟರಿ ಬಾಲಭವನದಲ್ಲಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದ್ದ ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿದ ಸಲುವಾಗಿ ಅಭಿನಂದನಾ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತನಾಡಿದರು.ಸಾಮಾಜಿಕ ಸೇವೆ ಮಾಡಬೇಕೆಂಬ ಮನಸ್ಸು ರೊಟರ‍್ಯಾಕ್ಟ್ನಲ್ಲಿದ್ದಾಗ ನನಗೆ ಹೆಚ್ಚು ಮೂಡಿತು, ಸಮಾಜ ಸೇವೆಯನ್ನೇ ನನ್ನ ಜೀವನದ ಉದ್ದೇಶ ಮಾಡಿಕೊಂಡಿದ್ದೇನೆ, ಸಮಾಜಸೇವೆ ಮಾಡಬೇಕೆನ್ನುವ ಗುರಿ ಇಟ್ಟುಕೊಂಡು ಪರೀಕ್ಷೆ ಬರೆದೆ. ಚಿತ್ರದುರ್ಗ ಜಿಲ್ಲೆ ಹಿಂದುಳಿಯಲು ಕಾರಣಗಳನ್ನ ಮನಸ್ಸು ಹುಡುಕುತ್ತಿತ್ತು.್ದ ಇಲ್ಲಿ ನೀರಿನ ಸಮಸ್ಯೆ, ಮಹಿಳೆಯರ ಸಮಸ್ಯೆ, ಬಾಲ್ಯ ವಿವಾಹ ಪದ್ದತಿ, ಮೂಢನಂಬಿಕೆಗಳ ಮೂಲಕ ಮಹಿಳೆಯರ ಶೋಷಣೆ ಮಾಡುವಂತಹ ಕೆಲವು ಆಚರಣೆಗಳನ್ನು ನಾನು ಬದಲಾಯಿಸಬೇಕು ಎಂಬ ಮನಸಿಟ್ಟುಕೊಂಡು ಪರೀಕ್ಷೆ ಬರೆದೆ, ಹೊರದೇಶಗಳಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಅವುಗಳ ಪರಿಹಾರದ ಬಗ್ಗೆ ಯೋಚನೆಗಳನ್ನ ರೂಪಿಸುತ್ತಿರುವಂತೆ ನಮ್ಮ ದೇಶದಲ್ಲೂ ಸಹ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿವಾರಣೆ ಬಗ್ಗೆ ಯೋಚಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ರೊ. ನಾಗರಾಜ್, ರೊ. ಲಕ್ಷ್ಮಣ್, ರೊ. ಬ್ರಹ್ಮಾನಂದ ಗುಪ್ತ, ರೊ.ಜಯಶ್ರಿ ಶಾ, ರೋ. ಡಾ. ಸಿ. ತಿಪ್ಪೇಸ್ವಾಮಿ, ರೋ. ಟಿ. ವೀರಭದ್ರಸ್ವಾಮಿ, ರೊ. ಡಾ. ಎಚ್. ಕೆ. ಎಸ್. ಸ್ವಾಮಿ, ರೋರ‍್ಯಾಕ್ಟ್ ಎಚ್.ಎಸ್. ರಚನಾ, ನೇಹ ಹಾಜರಿದ್ದರು.