
ಕಲಬುರಗಿ,ಏ 30:ತೋನಸನಹಳ್ಳಿ ಸಂಗಮೇಶ್ವರ ಸಂಸ್ಥಾನ ಮಠದ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಸಂಗಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳಿಂದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಎರ್ಪಡಿಸಲಾಗಿತ್ತು ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಶಿಬಿರ ಉದ್ಘಾಟಿಸಿ ಮಾತನಾಡಿ ಡಾ.ವಿಕ್ರಮ ಸಿದ್ಧಾರೆಡ್ಡಿಯವರಂತಹ ಸೇವಾ ಮನೋಭಾವಉಳ್ಳ ವೈದ್ಯರಿಂದ ಇಂದು ಆರೋಗ್ಯ ದಾಸೋಹ ನಡೆಯುತ್ತಿದೆ ಇದು ಒಳ್ಳೆಯ ಬೆಳವಣಿU.É ಯುನೈಟೆಡ್ ಆಸ್ಪತ್ರೆ ಎಂಡಿ ಡಾ.ವಿಕ್ರಮ್ ಸಿದ್ದಾರೆಡ್ಡಿಯವರು ವೈದ್ಯಕೀಯ ಕ್ಷೇತ್ರದ ಸಾಧಕರ ಸಾಲಿನಲ್ಲಿ ಸೇರಲಿ. ಜನರ ಸೇವೆ ಮಾಡುವಂತ ಅವಕಾಶಗಳು ಹೆಚ್ಚು ಹೆಚ್ಚು ಸಿಗಲಿಎಂದು ಹಾರೈಸಿ ಯುನೈಟೈಡ್ ನ ರಾಚಣ್ಣ ಮೇಲಕೇರಿ ಅವರಿಗೆ ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಆಶಿರ್ವದಿಸಿದರು ಮಳಖೇಡ ಶ್ರೀ ಸೇರಿದಂತೆ ವಿವಿಧ ಪೂಜ್ಯರು ಭಾಗವಹಿಸಿದ್ದರು