ಯುದ್ಧ ನೌಕೆಗೆ ಅದ್ದೂರಿ ಸ್ವಾಗತ

ಅಬುಜಾ ,(ನೈಜೀರಿಯಾ,), ಸೆ. ೯ -ನೈಜೀರಿಯಾದ ಪೋರ್ಟ್ ಲಾಗೋಸ್ ತಲುಪಿದ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ ಎಸ್ ತರ್ಕಾಶ್ ಗೆ ನೌಕಾಪಡೆಯ ಅಧಿಕಾರಿಗಳು, ಭಾರತದ ರಾಯಬಾರಿ ಕಚೇರಿ ಸಿಬ್ಬಂದಿ ಅದ್ದೂರಿ ಸ್ವಾಗತ ನೀಡಿದರು

ನೈಜೀರಿಯಾದಲ್ಲಿರುವ ಭಾರತೀಯ ಶಾಲೆಯ ಮಕ್ಕಳು ಸ್ವಾಗತಿಸಿದರು ಎಂದು ಭಾರತೀಯ ನೌಕಾಪಡೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನೈಜೀರಿಯನ್ ನೌಕಾಪಡೆಯೊಂದಿಗೆ ವೃತ್ತಿಪರ ಸಂವಾದ ನಡೆಸುವುದರ ಜೊತೆಗೆ, ಹಡಗು ಬಂದರು ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆಗಳಲ್ಲಿ ಭಾಗವಹಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ಎರಡೂ ದೇಶದ ನಡುವೆ ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸಲು , ಸಂವಹನ ಹಾಗು ಉಭಯ ರಾಷ್ಟ್ರಗಳ ನೌಕಾಪಡೆಗಳ ನಡುವೆ ಅಭ್ಯಾಸ ನಡೆಸಲು ನೆರವಾಗಲಿದೆ. ಬಳಿಕ ಹಡಗು ಸಂದರ್ಶಕರಿಗೆ ತೆರೆದಿರುತ್ತದೆ, ಭಾರತೀಯ ನಿವಾಸಿಗಳು ಮತ್ತು ಸ್ಥಳೀಯರಿಗೆ ತನ್ನ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಅವಕಾಶ ಒದಗಿಸಿದೆ.

ಇದಕ್ಕೂ ಮೊದಲು ಆಗಸ್ಟ್ ೧೫ ರಂದು, ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ರಿಯೊ ಡಿ ಜನೈರೊದಲ್ಲಿ ಎನ್ ಎನ್ ಎಸ್ ತರ್ಕಾಶ್ ರಾಷ್ಟ್ರ ದ್ವಜವನ್ನು ಹಾರಿಸಿತ್ತು.

ಭಾರತೀಯ ಮತ್ತು ಫ್ರೆಂಚ್ ನೌಕಾಪಡೆಗಳು ಜುಲೈ ೨೯ ಮತ್ತು ೩೦ ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಫ್ರೆಂಚ್ ನೌಕಾ ಹಡಗುಗಳೊಂದಿಗೆ ಸಮುದ್ರ ಪಾಲುದಾರಿಕೆ ವ್ಯಾಯಾಮ ಮಾಡಿ ಗಮನ ಸೆಳೆದಿದ್ದವು

ಕಡಲ ಕಣ್ಗಾವಲು ವಿಮಾನ ಫಾಲ್ಕನ್ ೫೦ ಜೊತೆಗೆ, ಹಲವಾರು ಅಣಕು ಕ್ಷಿಪಣಿ ತೊಡಗಿಸಿಕೊಳ್ಳುವಿಕೆ ಮತ್ತು ವಾಯು ರಕ್ಷಣಾ ಅಭ್ಯಾಸ ನಡೆಸಲಿವೆ